ವಿಜಯಪುರ: ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಸಿದ್ದರಾಮಯ್ಯ ಹೇಳಿದ್ದಾರೆ ಹಿಂದೂಗಳ ಮತ ಬೇಡ ಎಂದಿದ್ದಾರೆ. ಹಿಂದೂಗಳ ರೇಷನ್ ಕಡಿತವಾಗ್ತಿದೆ ಎಂದು ನನಗೂ ಮಾಹಿತಿ ಬಂದಿದೆ. ಕಾಂಗ್ರೆಸ್ ನವರು ಹಿಂದೂಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ. ಪಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಷನ್ ಕಾರ್ಡ್ ರದ್ದಾಗಿವೆ. ವೋಟು ಹಾಕಿಲ್ಲ ಎಂದು ಹಿಂದೂಗಳನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದರು.
ರೇಷನ್ ಕಾರ್ಡ್ ರದ್ದು ವಿಚಾರದಲ್ಲಿ ಗಾಬರಿ ಬೀಳುವ ಅವಶ್ಯಕತೆ ಇಲ್ಲ – ಡಿಸಿಎಂ ಡಿಕೆಶಿ
ಇನ್ನೂ, ವಕ್ಫ್ ವಿರುದ್ಧ ಅಧಿವೇಶನ ವೇಳೆ ಹೋರಾಟ ವಿಚಾರವಾಗಿ ಮಾತನಾಡಿ, ವಕ್ಫ ನೋಟಿಸ್ ವಾಪಸ್ ತಗೊಂಡರೆ ಸಾಲೋದಿಲ್ಲ. ವಕ್ಫ್ ನೋಟಿಫಿಕೇಶನ್ ರದ್ದಾಗಬೇಕು. ಕರಾಳ ಕಾನೂನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗೂ ಮನವಿ ಮಾಡಿದ್ದೇವೆ. ಮುಸ್ಲಿಂರಿಗಾಗಿ ವಕ್ಫ್ ಟ್ರಿಬುನಲ್ ಒಪ್ಪೋದಿಲ್ಲ. ದೇಶದಲ್ಲಿ ಇರಬೇಕಾದ್ರೆ ನಮ್ಮ ದೇಶದ ಕಾನೂನು ಪಾಲಿಸಬೇಕು. ನ.25 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡುತ್ತೇವೆ ಎಂದರು. ಅಲ್ಲದೇ ವಕ್ಫ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ತಿವಿ ಎಂದರು. ಮೋದಿಯವರು 42 ಆಪರೇಷನ್ ಮಾಡ್ತಿದ್ದಾರೆ. ಅದರಲ್ಲೂ ವಕ್ಫ್ ಜೀವಂತ ಉಳಿಯಲ್ಲ, ಜೀವಂತ ಉಳಿದರು ಇಂಜೆಕ್ಷನ್ ಕೊಟ್ಟು ಕೊಲ್ತೇವೆ ಎಂದರು.