ಹುಬ್ಬಳ್ಳಿ: ಬಿಪಿಎಲ್, ಎಪಿಲ್ ಕಾರ್ಡ್ ರದ್ದು ವಿಚಾರವಾಗಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಷ್ಟ ದಿನಗಳ ಕಾಲದಲ್ಲಿ ಏನು ಮಾಡಿತು..? ಸರ್ಕಾರ ಬಂದು ಎರಡು ವರ್ಷಗಳಾಯಿತು. ಈಗ ಯಾಕೆ ರದ್ದು ಮಾಡುವ ವಿಚಾರ ಬಂದಿದೆ. ಕೋಟ್ಯಂತರ ಕಾರ್ಡ್ ರದ್ದು ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡಿತಾ ಇದ್ದೀರಿ. ಗ್ಯಾರಂಟಿ ಕೊಡಲು ಆಗುತ್ತಿಲ್ಲ. ಆದ್ದರಿಂದ ಈಗ ಕಾರ್ಡ ರದ್ದು ಮಾಡುತ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದಲ್ಲಿ ಪ್ರಮುಖ ಚರ್ಚೆ ಆಗಬೇಕು ಎಂಬ ವಿಚಾರವಾಗಿ ಮಾತನಾಡಿ, ಬೆಳಗಾವಿ ಚಳಿಗಾಲ ಅಧಿವೇಶನ ಇದೊಂದು ಟೂರಿಂಗ್ ಟಾಕೀಸ್. ಉತ್ತರ ಕರ್ನಾಟಕ ಬಗ್ಗೆ ಕೇವಲ ಕಣ್ಣೀರು ಸುರಿಸುದು ಆಗಿದೆ. ಯಾವುದೇ ಉಪಯೋಗ ಆಗಿಲ್ಲ ಎಂದಿರುವ ಶೆಟ್ಟರ್, ವಕ್ಪ್ ವಿಚಾರ ಚಳಿಗಾಲ ಅಧಿವೇಶನದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ 50 ಕೋಟಿ ಆಮಿಷ ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿ, ಇದೊಂದು ಕೇವಲ ಅಪಪ್ರಚಾರ ಮಾಡುವ ಹುನ್ನಾರವಾಗಿದೆ. ಯಾವುದೇ ದಾಖಲೆ ಇದ್ದರೆ ಮೊದಲು ಬಿಡುಗಡೆ ಮಾಡಲಿ. ಆಡಿಯೋ ವಿಡಿಯೋ ಇದ್ದರೆ ಚುನಾವಣಾ ಸಂದರ್ಭದಲ್ಲಿಯೇ ಬಿಡುಗಡೆ ಮಾಡತಾ ಇದ್ದರು. ಬಿಜೆಪಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದೆ ಆಗಿದೆ, ಇದೊಂದು ಶುದ್ದು ಸುಳ್ಳು ಎಂದು ಪ್ರತಿಕ್ರಿಯಿಸಿದರು.