ಮಂಡ್ಯ : ಪುರಾಣ ಪ್ರಸಿದ್ಧ ಮೇಲುಕೋಟೆಯಲ್ಲಿ ರಥಸಪ್ತಮಿ ರಥೋತ್ಸವ ಸಂಭ್ರಮ ಕಳೆಕಟ್ಟಿದೆ. ರಥಸಪ್ತಮಿ ಹಿನ್ನೆಲೆ ಪುರಾಣ ಪ್ರಸಿದ್ದ ಮೇಲುಕೋಟೆ ಚಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆಯೆ ಸ್ವಾಮಿಗೆ ವಿಶೇಷ ಹೂಗಳ ಅಲಂಕಾರ ಮಾಡಲಾಗಿತ್ತು,. ದೇವಸ್ಥಾನದ ರಾಜ ಬೀದಿಯಲ್ಲಿ ಅದ್ದೂರಿ ರಥಸಪ್ತಮಿ ರಥೋತ್ಸವ ಜರುಗಿತು. ಬಗೆ ಬಗೆಯ ಪುಷ್ಪಗಳಿಂದ ಅಲಂಕೃತನಾದ ಗರುಢಾರೂಢನನ್ನ ಕಂಡು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ರಥಸಪ್ತಮಿ ರಥೋತ್ಸವಕ್ಕೆ ಜನಪದ ಕಲಾ ಮೇಳ ವಿಶೇಷ ಮೆರಗು ನೀಡಿದ್ದು, 50ಕ್ಕೂ ಹೆಚ್ಚು ಕಲಾ ತಂಡಗಳಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯತಿಉ. ಸ್ಥಾನಿಕಂ ನಾಗರಾಜ ಐಯ್ಯಂಗಾರ್ ಪ್ರತಿಷ್ಠಾನ ವೇದಿಕೆಯಿಂದ ರಾಜ್ಯಮಟ್ಟದ ಜನಪದ ಕಲಾ ಮೇಳ ನಡೆಯಿತು. ರಥಸಪ್ತಮಿ ರಥೋತ್ಸವದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ .ಚಲುವರಾಯಸ್ವಾಮಿ ಕುಟುಂಬ ಸಮೇತ ಭಾಗಿಯಾಗಿದ್ದಾರೆ.
Rahul Gandhi: ಬೆಳ್ಳಂಬೆಳಗ್ಗೆ ಮತ ಚಲಾಯಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ..!