ಆಕ್ರಮಿತ ಕ್ರಿಮಿಯಾ ಪ್ರಾಂತದ ಸೆವಾಸ್ಟೊಪೊಲ್ ನಗರದಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ ರಶ್ಯ ನೌಕಾಪಡೆಯ ಉನ್ನತ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ದಾಳಿಯನ್ನು ಉಕ್ರೇನ್ ಪ್ರಜೆ ನಡೆಸಿರುವುದಾಗಿ ಉಕ್ರೇನ್ನ ಭದ್ರತಾ ಪಡೆಯ ಮೂಲಗಳು ಹೇಳಿವೆ.
ಮೃತ ಅಧಿಕಾರಿಯನ್ನು ರಶ್ಯ ನೌಕಾಪಡೆಯ ಉನ್ನತ ಅಧಿಕಾರಿ ವ್ಯಾಲೆರಿ ಟ್ರಂಕೋವ್ಸ್ಕಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಬಾಂಬ್ ಇರಿಸಿ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಭಯೋತ್ಪಾದಕ ಕೃತ್ಯ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.