ಹುಬ್ಬಳ್ಳಿ: ನಗರದ ಚಿನ್ಮಯ ವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಆಡಳಿತಾಧಿಕಾರಿ ವಿಶ್ವನಾಥ ರಾನಡೆ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕುವೆಂಪು ಸಾಹಿತ್ಯ ವಿಶ್ವಮಾನ್ಯ. ಅವರ ಸಮಗ್ರ ಸಾಹಿತ್ಯ ಓದಿದರೆ ಮನುಜನರು ವಿಶ್ವಪಥಕ್ಕೆ ಮರಳುವರು. ಜಾತಿ,ಮತ, ಪಂಥ ಮೀರಿದ ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕು ಎಂದರು.
ಮುಖ್ಯೋಪಾಧ್ಯಾಯಿನಿ ನೀತಾ ಹೆಗಡೆ ಮಾತನಾಡಿದರು. ವಿದ್ಯಾರ್ಥಿನಿ ಸಿಂಚನಾ ಸಂಗಡಿಗರು ಭರತ ಭೂಮಿ ನನ್ನ ತಾಯಿ ಕವಿತೆ ಹಾಡಿದರು.
ಅಮೂಲ್ಯ ಜೋಶಿ, ಸರಯೂ ಕುಲಕರ್ಣಿ ಅಭಿಪ್ರಾಯ ಹಂಚಿಕೊಂಡರು.
ಶಿಕ್ಷಕರಾದ ಕೃಷ್ಣ ಮಲ್ಲಣ್ಣವರ, ಮೂಕಾಂಬಿಕಾ ಭಟ್ ಇತರರು ಇದ್ದರು.