ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಒಂದು ಬ್ಯಾಡ್ ನ್ಯೂಸ್ ಇದೆ. ನಟನೆ, ಫ್ಯಾಷನ್ ಜೊತೆ ಫಿಟ್ನೆಸ್ ಗೆ ಹೆಸರಾಗಿರುವ ರಶ್ಮಿಕಾ ಮಂದಣ್ಣಗೆ ನೋವಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ರಶ್ಮಿಕಾ ಗಾಯಗೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.
Power Cut: ನಾಳೆ ಬೆಂಗಳೂರಿನಲ್ಲಿ ಪವರ್ ಕಟ್! ಯಾವ ಏರಿಯಾ, ಎಷ್ಟು ಗಂಟೆಗೆ ವಿದ್ಯುತ್ ಕಡಿತ?
ರಶ್ಮಿಕಾ ಅವರು ಸಲ್ಮಾನ್ ಖಾನ್ ನಟನೆಯ ಸಿಖಂದರ್ ಸಿನಿಮಾದ ಶೂಟಿಂಗ್ಗೆ ಹೋಗಬೇಕಿತ್ತು. ಇದರ ನಡುವೆಯೇ ರಶ್ಮಿಕಾ ಜಿಮ್ನಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ.
ತನ್ನ ಬಲಗಾಲಿಗೆ ಪೆಟ್ಟಾಗಿರುವ ಫೋಟೋವನ್ನು ನಟಿ ಇನ್ಟ್ರಾದಲ್ಲಿ ಶೇರ್ ಮಾಡಿದ್ದಾರೆ. ಗಾಯಗೊಂಡ ಶ್ರೀವಲ್ಲಿ ಇದೀಗ ನೋವು ತೋಡಿಕೊಂಡಿದ್ದಾರೆ.
ಸದ್ಯಕ್ಕೆ ನಾನು HOP ಮೂಡ್ ನಲ್ಲಿ ಇದ್ದೇನೆ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದು, ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗಾಯಗೊಂಡ ನಟಿಯ ಬಲಗಾಲಿಗೆ ಬ್ಯಾಂಡೇಜ್ ಸುತ್ತಲಾಗಿದೆ. ಮನೆಯಲ್ಲೇ ರೆಸ್ಟ್ ಮಾಡ್ತಿರುವ ರಶ್ಮಿಕಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬೇಸರದ ಪೋಸ್ ಕೊಟ್ಟ ರಶ್ಮಿಕಾ, ಇದು ನನಗೆ ಹೊಸ ವರ್ಷದ ಶುಭಾಶಯಗಳು ಎಂದುಕೊಳ್ಳುವೆ. ಜಿಮ್ ನಲ್ಲಿ ನಾನು ಗಾಯಗೊಂಡಿದ್ದೇನೆ. ಹೀಗಾಗಿ ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ “ಹಾಪ್ ಮೋಡ್” ನಲ್ಲಿದ್ದೇನೆ
ಶೀಘ್ರದಲ್ಲೇ ಸಿಕಂದರ್ ಮತ್ತು ಕುಬೇರ ಸಿನಿಮಾ ಸೆಟ್ ಗಳಿಗೆ ಹಿಂತಿರುಗುತ್ತಿದ್ದೇನೆ ಎಂದುಕೊಂಡಿದ್ದೇನೆ. ಸಿನಿಮಾ ವಿಳಂಬಕ್ಕೆ ನನ್ನ ನಿರ್ದೇಶಕರ ಬಳಿ ಕ್ಷಮೆ ಕೇಳುವೆ. ನನ್ನ ಕಾಲು ನೋವು ಕಡಿಮೆ ಆಗಿ ಚೇತರಿಸಿಕೊಂಡ ಬಳಿಕ ಸಿನಿಮಾ ಶೂಟಿಂಗ್ಗೆ ಬರೋದಾಗಿ ನಟಿ ರಶ್ಮಿಕಾ ಮಂದಣ್ಣ ಬರೆದಿದ್ದಾರೆ.