ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಾತ್ರಿ ಬೆಳಗಾದ್ರಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿರುವ ನಟಿ ಇದೀಗ ನಿವೃತ್ತಿ ಬಗ್ಗೆ ಮಾತನಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾದ ಪ್ರಮೋಷನ್ ನಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಈ ಚಿತ್ರದಲ್ಲಿ ಮರಾಠ ದೊರೆ ಛತ್ರಪತಿ ಶಿವಾಜಿ ಪುತ್ರ ಸಾಂಭಾಜಿ ಮಹರಾಜನ ಪಾತ್ರದಲ್ಲಿ ವಿಕ್ಕಿ ನಟಿಸಿದ್ದಾರೆ. ನಟಿ ರಶ್ಮಿಕಾ ಅವರು ಸಾಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಪಾತ್ರ ಮಾಡಿ ತೃಪ್ತಿ ಆಗಿದೆ.
‘ಅದೊಂದು ಗೌರವ. ದಕ್ಷಿಣದಿಂದ ಬಂದು ಮಹಾರಾಣಿ ಯೇಸುಬಾಯಿ ಪಾತ್ರವನ್ನು ಮಾಡಿದ್ದೇನೆ. ಇದು ನನ್ನ ಜೀವಿತಾವಧಿಯಲ್ಲಿ ಮಾಡಿದ ವಿಶೇಷ ಕೆಲಸ. ಈ ಸಿನಿಮಾ ಬಳಿಕ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ನಿರ್ದೇಶಕ ಲಕ್ಷ್ಮಣ್ ಅವರಿಗೆ ರಶ್ಮಿಕಾ ಹೇಳಿದ್ದಾರೆ.
‘ನಾನು ಅಳುತ್ತಾ ಕೂರುವ ವ್ಯಕ್ತಿ ಅಲ್ಲ. ಆದರೆ, ಈ ಟ್ರೇಲರ್ನ ನನ್ನನ್ನು ಪ್ರಚೋದಿಸಿತು. ವಿಕ್ಕಿ ಕೌಶಲ್ ದೇವರ ರೀತಿ ಕಾಣುತ್ತಿದ್ದಾರೆ. ಅವರು ಛಾವಾ’ ಎಂದು ರಶ್ಮಿಕಾ ಮಂದಣ್ಣ ಅವರು ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಅವರಿಗೆ ಇನ್ನೂ 28 ವರ್ಷ ವಯಸ್ಸು. ಅವರು ಇಷ್ಟು ಬೇಗ ನಿವೃತ್ತಿ ಪಡೆಯೋದು ಅನುಮಾನವೇ ಆಗಿದೆ.
ಇತ್ತೀಚೆಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ರಶ್ಮಿಕಾ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಡೆದಾಡಲು ಕಷ್ಟಪಡುತ್ತಿರುವ ನಟಿ ಈ ಮಧ್ಯೆಯೇ ಛಾವಾ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ.