ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ಬಾರಿಯ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ಒಂದು ದಿನ ಅಬುಧಾಬಿಯಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ, ಹುಟ್ಟು ಹಬ್ಬದ ಪಾರ್ಟಿ ಯುಎಸ್ಎಗೆ ಶಿಫ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ವಿಜಯ್ ದೇವರಕೊಂಡ (Vijay Devarakonda) ಎನ್ನುವ ಮಾತೂ ಕೇಳಿ ಬಂದಿದೆ.
ಇಂದಿನಿಂದ ಹೊಸ ಅಧ್ಯಾಯ ಆರಂಭವಾಗುತ್ತಿದೆ: ಮಂಡ್ಯ ಸಪೋರ್ಟರ್ಸ್ ಇದ್ದಾರೆ – ಸುಮಲತಾ ಅಂಬರೀಶ್!
ಇಂದು ವಿಜಯ್ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಯುಎಸ್.ಎನಲ್ಲಿ ಅದರ ಸ್ಪೆಷಲ್ ಶೋ ಆಯೋಜನೆ ಆಗಿದೆ. ಅದರಲ್ಲಿ ವಿಜಯ್ ದೇವರಕೊಂಡ ಕೂಡ ಭಾಗಿಯಾಗಿದ್ದಾರೆ. ಹಾಗಾಗಿ ಹುಟ್ಟು ಹಬ್ಬವನ್ನು ಯುಎಸ್.ಎನಲ್ಲಿ ಆಚರಿಸಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ರಶ್ಮಿಕಾ ಪೋಸ್ಟ್ ಮಾಡಿದ ಪೋಸ್ಟರ್ ನಲ್ಲಿ ನವಿಲು ಇದೆ. ವಿಜಯ್ ದೇವರಕೊಂಡ ಹಾಕಿರೋ ಪೋಸ್ಟ್ ನಲ್ಲೂ ಅದೇ ನವಿಲಿದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಊಹಿಸಲಾಗಿದೆ.
ಇಂದು ರಶ್ಮಿಕಾ ಮಂದಣ್ಣ (Rashmika Mandanna) ಅವರ ಹುಟ್ಟು ಹಬ್ಬ. ಈ ಬಾರಿಯ ಹುಟ್ಟು ಹಬ್ಬಕ್ಕೆ ಹಲವಾರು ಸರ್ ಪ್ರೈಸ್ ಗಳಿವೆ. ಈ ಎಲ್ಲ ಸರ್ ಪ್ರೈಸ್ ಗಳ ಮಧ್ಯೆ ರಶ್ಮಿಕಾ ವಿದೇಶದಲ್ಲಿದ್ದಾರೆ. ಇದು ರಶ್ಮಿಕಾ ಅವರ 28ನೇ ವರ್ಷದ ಹುಟ್ಟು ಹಬ್ಬವಾಗಿದೆ. ತಮ್ಮ ಬರ್ತ್ಡೇ (Birthday) ದಿನವೇ ಅವರ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಪುಷ್ಪ ಬೆಡಗಿಯ ಹೊಸ ಸಿನಿಮಾದ ಅಪ್ಡೇಟ್ ಸಿಗಲಿದೆ.