ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ವಿಜಯ್ ದೇವರಕೊಂಡ (Vijay Devarakonda) ಹೆಸರು ತಳುಕು ಹಾಕಿಕೊಂಡಿರೋದು ಇದೇ ಮೊದಲ ಬಾರಿ ಏನಲ್ಲ. ಆದರೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್ (Engagement) ಮಾಡಿಕೊಳ್ತಿದ್ದಾರೆ
‘ಗೀತ ಗೋವಿಂದಂ’ ಜೋಡಿ ಡೇಟಿಂಗ್ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದೆ. ಇಬ್ಬರೂ ಜೊತೆಯಾಗಿರುವಾಗ ಸಾಕಷ್ಟು ಬಾರಿ ಪಾಪರಾಜಿಗಳ ಕಣ್ಣಿಗೆ ಒಟ್ಟಿಗೆ ತಗ್ಲಾಕೊಂಡಿದ್ದಾರೆ. ಆದರೂ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡಿದ್ದಾರೆ. ಇದುವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತಗೊಳಿಸಿಲ್ಲ.
ವಿಜಯ್ ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಈ ವರ್ಷ ತೆರೆಗೆ ಬರಲಿದೆ. ಪುಷ್ಪ 2 ಚಿತ್ರ, ರೈನ್ಬೋ, ಚಾವಾ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.