ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ನ ಬೇಡಿಕೆಯ ನಟಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದೀಗ ಕಿರಿಕ್ ಬ್ಯೂಟಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ಗೆ ಜೋಡಿಯಾಗಿದ್ದಾರೆ.
ಯೆಸ್. ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಜೋಡಿಯಾಗಿ ನಟಿಸುತ್ತಿರುವ ಶಿಕಂದರ್ ಸಿನಿಮಾ 2025ರ ಈದ್ಗೆ ರಿಲೀಸ್ ಆಗಲಿದೆ. ದೊಡ್ಡ ತೆರೆ ಮೇಲೆ ಈ ಕಾಂಬಿನೇಷನ್ ನೋಡಲು ಕಾಯುತ್ತಿದ್ದೀವಿ’ ಎಂದು ನಾಡಿಯಾವಾಲಾ ಗ್ರಾಂಡ್ಸನ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಚಿತ್ರವನ್ನು ಏ ಆರ್ ಮುರುಗಾದಾಸ್ ನಿರ್ದೇಶನ ಮಾಡುತ್ತಿದ್ದಾರೆ.
‘ನೀವೆಲ್ಲರೂ ತುಂಬಾ ದಿನಗಳಿಂದ ಅಪ್ಡೇಟ್ ನೀಡಿ ಎಂದು ಕೇಳುತ್ತಿದ್ದೀರಿ, ಇಲ್ಲಿದೆ ನೋಡಿ….ಸರ್ಪ್ರೈಸ್. ಶಿಕಂದರ್ ಚಿತ್ರತಂಡದ ಜೊತೆ ಕೆಲಸ ಮಾಡಲು ತುಂಬಾನೇ ಖುಷಿಯಾಗುತ್ತಿದೆ’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ.