ಪುಷ್ಪ 2 ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ತಾವು ಕಾಲಿಗೆ ಗಾಯ ಮಾಡಿಕೊಂಡಿರುವ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಏರ್ಪೋರ್ಟ್ನಲ್ಲಿ ಸಿಬ್ಬಂದಿಯ ಸಹಾಯದಿಂದ ಕುಂಟುಂತಾ ನಡೆಯುತ್ತಿರುವ ಆ ನಂತರ ನಡೆಯಲಾಗದೆ ವ್ಹೀಲ್ಚೇರ್ ಮೇಲೆ ಕುಳಿತಿರುವ ದೃಶ್ಯಗಳು ವೈರಲ್ ಆಗಿದ್ದು, ನಟಿಯ ಅಭಿಮಾನಿಗಳಿಗೆ ಆತಂಕ ವ್ಯಕ್ತಡಿಸಿದ್ದಾರೆ.
ಜಿಮ್ ಮಾಡುವ ವೇಳೆ ರಶ್ಮಿಕಾ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ರಶ್ಮಿಕಾ. ವ್ಯಾಯಾಮ ಮಾಡುವ ಸಮಯದಲ್ಲಿ ಆದ ಗಾಯದಿಂದ ರಶ್ಮಿಕಾರ ಕಾಲಿನ ಮೂಳೆಯಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಚಿಕಿತ್ಸೆಯನ್ನೂ ಸಹ ರಶ್ಮಿಕಾ ಪಡೆಯುತ್ತಿದ್ದಾರೆ. ವಾರದ ಹಿಂದೆ, ಪ್ಲಾಸ್ಟರ್ ಹಾಕಿದ ತಮ್ಮ ಕಾಲಿನ ಚಿತ್ರವನ್ನು ಸಹ ರಶ್ಮಿಕಾ ಹಂಚಿಕೊಂಡಿದ್ದರು.
ಕಾಲಿಗೆ ಪೆಟ್ಟಾದ ಕಾರಣಕ್ಕೆ ರಶ್ಮಿಕಾ ಕುಟುಂತ್ತಾ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ನಡೆಯಲು ಕಷ್ಟಪಡುತ್ತಿರುವ ಕಾರಣ ವ್ಹೀಲ್ಚೇರ್ನ ಸಹಾಯವನ್ನು ರಶ್ಮಿಕಾ ಪಡೆದಿದ್ದಾರೆ. ಕಾಲು ನೋವಿನ ನಡೆಯುವೆಯೂ ಸಹ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದಾರೆ. ಇಂದು ಬೆಳಿಗ್ಗೆ ಅವರು ಹೈದರಾಬಾದ್ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗಿದ್ದು, ಅಲ್ಲಿ ಅವರ ನಟನೆಯ ಹಿಂದಿ ಸಿನಿಮಾ ‘ಛಾವಾ’ದ ಡಬ್ಬಿಂಗ್ ಮತ್ತು ಪ್ಯಾಚ್ ವರ್ಕ್ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಫೆಬ್ರವರಿ 14 ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದ ಡಬ್ಬಿಂಗ್ ಹಾಗೂ ಮುಖ್ಯವಾಗಿ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಪಾಲ್ಗೊಳ್ಳಬೇಕಿದೆ. ಆದರೆ ರಶ್ಮಿಕಾಗೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ಇಂಥಹಾ ಕಠಿಣ ಸ್ಥಿತಿಯಲ್ಲಿ ರಶ್ಮಿಕಾ ಸಿನಿಮಾ ಕಾರ್ಯವನ್ನು ಹೇಗೆ ಭಾಗಿಯಾಗುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.