ನವದೆಹಲಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರದ್ದು ಎನ್ನಲಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ವೈರಲ್ ಆಗಿದ್ದು, ಬಿಸಿ ಬಿಸಿ ಚರ್ಚೆಯಲ್ಲಿದೆ. ವೀಡಿಯೋದಲ್ಲಿ ರಶ್ಮಿಕಾ ಅವರ ಎದೆ ಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ಆದರೀಗ ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂಬ ಸತ್ಯ ಬಯಲಾಗಿದೆ.
ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಮೂಲ ವೀಡಿಯೋವನ್ನ ಪತ್ತೆ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ವಾಸ್ತವಾಂಶ ಬಯಲಾದ ಬಳಿಕ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekha) ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ದೇಶದ ಐಟಿ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವೀಡಿಯೋ ಮತ್ತು ಇತರ ವಿಷಯಗಳನ್ನು ತೆಗೆದುಹಾಕುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
PM @narendramodi ji's Govt is committed to ensuring Safety and Trust of all DigitalNagriks using Internet
Under the IT rules notified in April, 2023 – it is a legal obligation for platforms to
➡️ensure no misinformation is posted by any user AND
➡️ensure that when reported by… https://t.co/IlLlKEOjtd
— Rajeev Chandrasekhar 🇮🇳 (@Rajeev_GoI) November 6, 2023
ಇದರೊಂದಿಗೆ ತಮ್ಮ ಪೋಸ್ಟ್ನಲ್ಲಿ, ಯಾವುದೇ ವೇದಿಕೆಯಲ್ಲಿ ತಪ್ಪು ಮಾಹಿತಿ ಪೋಸ್ಟ್ ಮಾಡಿದ್ರೆ, ಅದನ್ನ 36 ಗಂಟೆಗಳ ಒಳಗೆ ತೆಗೆದುಹಾಕಬೇಕು. ಇಲ್ಲದಿದ್ದರೇ ನೊಂದ ವ್ಯಕ್ತಿ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು ಎಂದು ಎಚ್ಚರಿಸಿದ್ದಾರೆ. ನರೇಂದ್ರ ಮೋದಿಜೀ ಅವರ ಸರ್ಕಾರವೂ ಇಂಟರ್ನೆಟ್ ಬಳಸುವ ಎಲ್ಲಾ ಡಿಜಿಟಲ್ ನಾಗರಿಕೆ ಸುರಕ್ಷತೆ ಮತ್ತು ನಂಬಿಕೆ ಉಳಿಸಿಕೊಳ್ಳಲು ಬದ್ಧವಾಗಿದೆ.
ಏಪ್ರಿಲ್, 2023 ರಲ್ಲಿ ಸೂಚಿಸಲಾದ ಐಟಿ ನಿಯಮಗಳ ಅಡಿಯಲ್ಲಿ – ಇದು ಪ್ಲಾಟ್ಫಾರ್ಮ್ಗಳಿಗೆ ಕಾನೂನು ಬಾಧ್ಯತೆಯಾಗಿದೆ. ಯಾವುದೇ ಬಳಕೆದಾರರು ಮತ್ತು ಪ್ಲಾಟ್ಫಾರ್ಮ್ಗಳು ಇದನ್ನು ಅನುಸರಿಸದಿದ್ದರೆ 36 ಗಂಟೆಗಳಲ್ಲಿ ತಪ್ಪು ಮಾಹಿತಿಗಳನ್ನು ತೆಗೆದುಹಾಕಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇದು ಐಟಿ ನಿಯಮ 7ರ (IT rules Seven) ಅಡಿಯಲ್ಲಿ ಕಾನೂನು ಉಲ್ಲಂಘನೆಯಾಗಲಿದ್ದು, ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಬಾಧಿತ ವ್ಯಕ್ತಿಯಿಂದ ವೇದಿಕೆಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು ಎಂದು ಎಚ್ಚರಿದ್ದಾರೆ. ಇಂತಹ ಹಾನಿಕಾರಕ ತಪ್ಪು ಮಾಹಿತಿಗಳನ್ನು ವೇದಿಕೆಗಳ ಮೂಲಕ ವ್ಯವಹರಿಸಬೇಕು ಎಂದೂ ಹೇಳಿದ್ದಾರೆ.