ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಈ ಕುರಿತು ನಟಿ ಪ್ರತಿಕ್ರಿಯಿಸಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶದನ ರಣ್ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಕಾಂಬಿನೇಷನ್ ನ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿಯಲ್ಲಿರುವ ಚಿತ್ರತಂಡ ಅದೇ ಖುಷಿಯಲ್ಲಿ ಅನಿಮಲ್ ಪಾರ್ಟ್ 2ಗೂ ತಯಾರಿ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಇದುವರೆಗೂ ಸಿನಿಮಾವೊಂದಕ್ಕೆ ಎರಡರಿಂದ ಮೂರು ಕೋಟಿ ರೂ. ಚಾರ್ಜ್ ಮಾಡುತ್ತಿದ್ದ ನಟಿ ಇದೀಗ 4 ರಿಂದ 5 ಕೋಟಿ ರೂ.ವರೆಗೆ ಹೆಚ್ಚಳ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇದಕ್ಕೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿ ರಶ್ಮಿಕಾ ಗಮನಕ್ಕೂ ಬಂದಿದ್ದು, ಇದೆಲ್ಲವನ್ನೂ ನೋಡಿದ ನಂತರ ನಾನು ಅದನ್ನು ನಿಜವಾಗಿಯೂ ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಿರ್ಮಾಪಕರು ಕೇಳಿದರೆ, ಆಗ ನಾನು ಹೇಳುತ್ತೇನೆ ಕೆಲ ಮಾಧ್ಯಮಗಳು ಇದನ್ನು ಹೇಳುತ್ತಿವೆ ಸರ್. ನಾನು ಅವರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಯೋಚಿಸಿದ್ದೇನೆ. ನಾನೇನು ಮಾಡಲಿ? ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ 4ರಿಂದ 5 ಕೋಟಿ ರೂ. ಕೊಟ್ಟರೆ ಸಿನಿಮಾ ಮಾಡ್ತೀನಿ ಎಂಬ ಅರ್ಥದಲ್ಲಿ ನಟಿ ರಿಯಾಕ್ಟ್ ಮಾಡಿದ್ದಾರೆ.