ಅಫ್ಘಾನಿಸ್ಥಾನ ತಂಡದ T20 ತಂಡದ ನಾಯಕ ರಶೀದ್ ಖಾನ್ ಅವರು ತಾಲಿಬಾನ್ ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಅಫ್ಘಾನಿಸ್ತಾನದ ಕ್ರಿಕೆಟ್ ಸೂಪರ್ಸ್ಟಾರ್ ರಶೀದ್ ಖಾನ್ ಬುಧವಾರ ತಾಲಿಬಾನ್ ಸರ್ಕಾರವನ್ನು ಒತ್ತಾಯಿಸಿದ್ದು, ದೇಶದಲ್ಲಿ ಮಹಿಳೆಯರಿಗೆ ವೈದ್ಯಕೀಯ ತರಬೇತಿಯ ಮೇಲಿನ ನಿಷೇಧವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ, ಈ ನಿರ್ಧಾರವು ಅವರ ಭವಿಷ್ಯ ಮತ್ತು ಘನತೆಯ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವೈದ್ಯಕೀಯ ಕೋರ್ಸ್ಗಳನ್ನು ನೀಡುವುದನ್ನು ನಿಲ್ಲಿಸುವಂತೆ ತಾಲಿಬಾನ್ ನಾಯಕತ್ವವು ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತಾಲಿಬಾನ್ ಸರ್ಕಾರ ಸಚಿವ ಹಿಬತುಲ್ಲಾ ಅಖುಂದ್ಜಾದಾ ಅವರು ಡಿಸೆಂಬರ್ 2 ರಂದು ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವೈದ್ಯಕೀಯ ತರಬೇತಿಯನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದರು.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಶೀದ್ ಖಾನ್, ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಆರೋಗ್ಯ ರಕ್ಷಣೆಯಲ್ಲಿ ಮಹಿಳಾ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಶಿಕ್ಷಣ ಎಂಬುದು ಪ್ರತಿಯೊಬ್ಬ ಮುಸ್ಲಿಂ ಪುರುಷ ಮತ್ತು ಮಹಿಳೆಗೆ ಕಡ್ಡಾಯವಾಗಿದೆ. ಆದರೆ ನಮ್ಮ ಸಹೋದರಿಯರಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ಮುಚ್ಚಿರುವ ಸುದ್ದಿಯಿಂದ ನಾನು ದುಃಖಿತನಾಗಿದ್ದೇನೆ. ಅಲ್ಲದೆ ಸರ್ಕಾರ ನಡೆಯಿಂದ ನಿರಾಶೆಗೊಂಡಿದ್ದೇನೆ ಎಂದು ರಶೀದ್ ಖಾನ್ ಹೇಳಿದ್ದಾರೆ.
ಅಫ್ಘಾನ್ ಮಹಿಳೆಯರನ್ನು ಶುಶ್ರೂಷಕಿ ಮತ್ತು ನರ್ಸಿಂಗ್ ಕೋರ್ಸ್ಗಳಿಂದ ನಿಷೇಧಿಸಿರುವ ನಿಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಯಾರಿಗೂ ಶಿಕ್ಷಣವನ್ನು ನಿರಾಕರಿಸಬಾರದು ಎಂದು ರಶೀದ್ ಖಾನ್ ಆಗ್ರಹಿಸಿದ್ದಾರೆ.