ತುಮಕೂರು:- ಜಿಲ್ಲೆಯ ಮಧುಗಿರಿ ಉಪವಿಭಾಗದ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಲಾಗಿದೆ. ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್ ಮಾಡಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಿ ಇಂದು ಡಿಜಿ ಆದೇಶ ಹೊರಡಿಸಿದ್ದಾರೆ.
ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ್ದಾರೆ. ಆದರೆ, ಡಿವೈಎಸ್ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.