ಬಳ್ಳಾರಿ:- ಜಿಲ್ಲೆಯ ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನ ಪುಸುಲಾಯಿಸಿ ಕರೆದೊಯ್ದು ದುಷ್ಕರ್ಮಿಯಿಂದ ಅತ್ಯಾಚಾರ ಎಸಗಿರುವಂತಹ ಘಟನೆ ಜರುಗಿದೆ.
ಯಡಿಯೂರಪ್ಪರ ಬಗ್ಗೆ ಮಾತಾಡಿದ್ರೆ ಜಾರಕಿಹೊಳಿ ಹೊರಗಡೆ ತಿರುಗಾಡೋದು ಕಷ್ಟವಾಗತ್ತೆ: ಎಚ್ಚರಿಕೆ ಕೊಟ್ಟ ಬಿವೈವಿ!
ಹತ್ತು ವರ್ಷದ ಹಿಂದೆ ಕೆಲಸ ಅರಸಿ ಬಂದು ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಮಗುವಿನ ಮೇಲೆ ಅತ್ಯಾಚಾರವೆಸಗಲಾಗಿದೆ. ಲೈಂಗಿಕ ದಾಳಿಯಿಂದ ಮಗುವಿಗೆ ಆಂತರಿಕ ಗಾಯವಾಗಿ, ತೀವ್ರ ರಕ್ತಸ್ರಾವ ಉಂಟಾಗಿದೆ.
ಕೂಡಲೇ ಮಗುವಿಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ಅತ್ಯಾಚಾರ ನಡೆದಿರುವುದು ಧೃಡಪಟ್ಟಿದೆ. ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.