ಬೆಂಗಳೂರು: ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿದ ಕೇಸ್ನಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಣಿಕ್ಯ ಪಟಾಕಿ ರನ್ಯಾ ರಾವ್ ಜಾಮೀನು ಭವಿಷ್ಯ ಕೆಲವೇ ಹೊತ್ತಲ್ಲಿ ಹೊರ ಬೀಳಲಿದ್ದು, ರನ್ಯಾರಾವ್ ಗೆ ಜಾ(ಮೂ)ಮೀನು ಸಿಗುತ್ತಾ ಇಲ್ವಾ ಅನೋದು ಭಾರಿ ಕುತೂಹಲ ಎಹಚ್ಚಿಸಿದೆ.
ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿರುವ , ಆರ್ಥಿಕ ಅಪರಾಧದ ವಿಶೇಷ ನ್ಯಾಯಾಲ, ಮಧ್ಯಾಹ್ನದ ನಂತರ ಜಾಮೀನು ಆದೇಶ ನೀಡುವ ಸಾಧ್ಯತೆ ಇದೆ.
ನಟಿ ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಾಡಿದ್ದಾರೆ. ಡಿಆರ್ಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಹೆಣ್ಣು ಎಂದೂ ನೋಡದೆ ರಾತ್ರಿಯಿಡೀ ತನಿಖೆ ಮಾಡಿ ಮಾನಸಿವಾಗಿ ಹಿಂಸೆ ನೀಡುವ ಕೆಲಸವಾಗಿದೆ. ಅರೆಸ್ಟ್ ಮೇಮೊ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನನ್ನ ಕಕ್ಷಿದಾರೆಯ ಪಾತ್ರ ಇಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದು, ಜಾಮೀನು ನೀಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಗೆ ಜೈಲೂಟದಿಂದ ಬಿಡುಗಡೆ ಭಾಗ್ಯ ಸಿಗುತ್ತಾ ಅಂತ ಕಾದು ನೋಡಬೇಕಿದೆ..