ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಇನ್ನೊಬ್ಬ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಶಿಕಾರಿಪುರ ಪೇಟೆಯಲ್ಲಿ ಸಂಭವಿಸಿದೆ. ಬೈಕ್ ಗೆ ದಾರಿ ಬಿಡುವ ವಿಚಾರದಲ್ಲಿ ಹಲ್ಲೆ ನಡೆದಿರುವುದಾಗಿ ತಿಳಿದು ಬಂದಿದೆ.
ಶಿಕಾರಿಪುರದ ಮಾಸೂರು ವೃತ್ತದಲ್ಲಿ ಹರ್ಷ ಎಂಬ ಯುವಕ ಬೈಕ್ ನಲ್ಲಿ ಹೋಗುವಾಗ ದಾರಿಗಾಗಿ ಹಾರನ್ ಮಾಡಿದಾಗ ಎದುರಿದ್ದ ಸಕ್ಲೈನ್ ಮತ್ತು ಹರ್ಷ ನ ನಡುವೆ ಮಾತಿಗೆ ಮಾತು ಬೆಳೆದಿದೆ. ಅಲ್ಲೇ ಇದ್ದ ಹಣ್ಣಿನ ಅಂಗಡಿಯಿಂದ ಚಾಕು ತಂದು ಸಕ್ಲೇನ್ ಹರ್ಷನ ಮೇಲೆ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಭಾರತಕ್ಕೆ ಕೇವಲ ಎರಡು ಅಲ್ಲ, ತಮಿಳು ಸೇರಿದಂತೆ ಬಹು ಭಾಷೆಗಳ ಅಗತ್ಯವಿದೆ: ಪವನ್ ಕಲ್ಯಾಣ್
ಹರ್ಷನ ತಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಗಾಯಗಳಿಗೆ ಸ್ಟಿಚ್ ಹಾಕಿ ಶಿಕಾರಿಪುರ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್ ಗೆ ಹರ್ಷನನ್ನು ಸಾಗಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಶಿಕಾರಿಪುರ ಪೊಲೀಸರು ಕ್ರಮ ಜರುಗಿಸಿದ್ದಾರೆ. ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.