ಮೈಸೂರು: ಗೋಲ್ಡ್ ಸ್ಮಗ್ಕಿಂಗ್ ಕೇಸ್ನಲ್ಲಿ ಸಿಲುಕಿರೋ ಚಿನ್ನದ ರಾಣಿ ರನ್ಯಾ ರಾವ್ ತಂದೆ ರಾಮಚಂದ್ರರಾವ್ ಗೂ ಇದೀಗ ಇದೇ ಪ್ರಕರಣ ತಲೆ ಬಿಸಿ ತಂದಿದೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ವಿಚಾರಣೆ ವೇಳೆಯೇ ಮೈಸೂರಿನ 2014 ರ ಚಿನ್ನ ದರೋಡೆ ಪ್ರಕರಣವೊಂದು ಮತ್ತೆ ಮುನ್ನಲೆಗೆ ಬಂದಿದೆ. ಇದು ರಾಮಚಂದ್ರರಾವ್ಗೆ ಸಂಕಷ್ಟ ತರುವ ಸಾಧ್ಯತೆ ದಟ್ಟವಾಗಿದೆ.
ಏನಿದು ಘಟನೆ ..?
ಹೌದು, 2014 ರಲ್ಲಿ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆದಿತ್ತು. ಅಂದು ದಕ್ಷಿಣ ವಲಯ ಐಜಿಪಿಯಾಗಿದ್ದ ರಾಮಚಂದ್ರರಾವ್. ರಾಮಚಂದ್ರರಾವ್ ಅವರ ಮೌಖಿಕ ದೂರಿನ ಮೇಲೆ ಅಂದು ದಾಳಿ ನಡೆದಿತ್ತು. 2014ರ ಮಾರ್ಚ್ 3ರಂದು ನಡೆದಿದ್ದ ದಾಳಿ ಸಂಬಂಧ ಇಲವಾಲ ಠಾಣೆಯಲ್ಲಿ ಎಫ್ ಐ ಆರ್ ಕೂಡ ದಾಖಲಾಗಿತ್ತು.
ರಾಮಚಂದ್ರರಾವ್ ಅವರ ಗನ್ ಮ್ಯಾನ್ ಮೂಲಕ ಮಾಹಿತಿ ಮೇರೆಗೆ, ಬೆಂಗಳೂರಿನಿಂದ ಕೇರಳದ ಕ್ಯಾಲಿಕಟ್ಗೆ ತೆರಳುತ್ತಿದ್ದ ಬಸ್ ಮೇಲೆ ಅಂದಿನ ಮೈಸೂರು ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ತಪಾಸಣೆ ಮಾಡಲಾಗಿತ್ತು. ಈ ತಪಾಸಣೆ ವೇಳೆ 20 ಲಕ್ಷ ರೂ ನಗದು ಪತ್ತೆ, ದಾಳಿಯ ವೀಡಿಯೋ ಮಾಡಿಕೊಂಡಿದ್ದ ಪೊಲೀಸರಿಂದಲೇ ಕೆಲವು ನಿಮಿಷಗಳ ವಿಡಿಯೋ ಡಿಲೀಟ್ ಆಗಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಿಕ್ಕ ಹಣ ನಮ್ಮದಲ್ಲ ಎಂದಿದ್ದ ಎಂದಿದ್ದರು. ಈ ವೇಳೆ ಬಸ್ಸಿನಲ್ಲಿ ಎರಡು ಕೋಟಿಗೂ ಅಧಿಕ ಹಣ ಎರಡು ಕೆಜಿ ಚಿನ್ನ ಇತ್ತು ಎಂಬ ಗುಸು-ಗುಸು ಹರಡಿತ್ತು. ಅದೂ ಅಲ್ಲದೇ ದಾಳಿ ಮಾಡಿದ್ದ ಪೊಲೀಸರ ವಿರುದ್ಧವೇ ಎಫ್ಐ ಆರ್ ದಾಖಲಾಗಿತ್ತು. ಒಂದೂವರೆ ವರ್ಷಗಳ ಕಾಲ ಪೊಲೀಸರೇ ಸೆರೆವಾಸ ಅನುಭವಿಸಿದ್ದರು
ಇನ್ನೂ ತನಿಖೆಯೇ ನಡೆದಿಲ್ಲ
ಇನ್ನೂ ವಿಪರ್ಯಾಸವೆಂದರೆ ಕೂಡ ಆ ಮೈಸೂರಿನ ಇಲವಾಲ ಬಸ್ ದರೋಡೆ ಪ್ರಕರಣದ ತನಿಖೆಯೇ ನಡೆದಿಲ್ಲ. ಇಂದಿಗೂ ಬಸ್ ದಾಳಿ ಪ್ರಕರಣ ನಿಗೂಢವಾಗಿಯೇ ಉಳಿದದಿದ್ದು, ದಾಳಿ ನಡೆಸಿದ್ದ ಪೊಲೀಸರ ವಿರುದ್ಧವೇ ಪ್ರಕರಣ ಏಕೆ ದಾಖಲಾಯಿತು..? ದಾಳಿ ನಡೆಸಿದ ಪೊಲೀಸರು ಒಂದೂವರೆ ವರ್ಷ ಶಿಕ್ಷೆ ಏಕೆ ಅನುಭವಿಸಿದ್ರು..? 2014ರ ಜನವರಿಯಲ್ಲೇ ಎಫ್ಐ ಆರ್ ದಾಖಲಾಗಿದರೆ. ಇದಾಗಿ 9 ವರ್ಷ ಕಳೆದರೂ ಇಂದಿಗೂ ಅಂತಿಮ ವರದಿ ಸಲ್ಲಿಕೆ ಆಗಿಲ್ಲ. ಅಂದಿನ ಎಸ್ಪಿ ಅಭಿನವ ಖರೆ ಅವರಿಗೆ ಸೂಕ್ತ ಕ್ರಮಕ್ಕೆ ಪತ್ರ ಬರೆದಿದ್ದ ರಾಮಚಂದ್ರರಾವ್, ಆ ಬಳಿಕ ಸುಮ್ಮನಾಗಿದ್ದೇಕೆ..? ಹಲವು ಅನುಮಾನಗಳು ಮೂಡಿವೆ.
ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ
ಮೈಸೂರಿನ ಇಲವಾಲ ಬಸ್ ದಾಳಿ ಪ್ರಕರಣದಲ್ಲಿ ಖುದ್ದು ಅಂದು ದಕ್ಷಿಣ ವಲಯದ ಐಜಿಪಿ ರಾಮಚಂದ್ರರಾವ್ ಸೂಚನೆ ನೀಡಿದ್ದರು. ದಾಳಿ ನಡೆಸಿದ ಮೇಲೆ ಅಕ್ರಮ ಹಣ ಸಾಗಾಟ ಪತ್ತೆ ಆಗಿತ್ತು. ಎರಡು ಕೋಟಿ ಹಣಕ್ಕೆ ಬದಲಿಗೆ 20 ಲಕ್ಷ ರೂ ತೋರಿಸಿದ್ದು ಯಾರು? ಪ್ರಕರಣದಲ್ಲಿ ಪೊಲೀಸರೇ ಜೈಲು ಪಾಲಾಗಿದ್ದು ಏಕೆ? ಈವರೆಗೂ ಸಮಗ್ರ ತನಿಖೆ ಏಕೆ ನಡೆಯಲಿಲ್ಲ ಪ್ರಕರಣ ಸಂಬಂಧ ಅಂತಿಮ ವರದಿ ಏಕೆ ಸಲ್ಲಿಸಲಿಲ್ಲ. ದೂರುದಾರ ನೀಡಿದ ದೂರಿನ ಮೇಲೆ ಏಕೆ ಕ್ರಮ ಆಗಲಿಲ್ಲ. ಎರಡು ಕೋಟಿ ಹಣ ಹಾಗು ಎರಡು ಕೆಜಿ ಚಿನ್ನ ಏನಾಯ್ತು..? ಪ್ರಶ್ನೆಗಳು ಎದ್ದಿವೆ.