ಬೆಂಗಳೂರು: ಬಾದ್ ಷಾ ಕಿಚ್ಚ ಸುದೀಪ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ಲು.. ತಮಿಳಿನಲ್ಲೂ ನಟಿಸಿದ್ಲು.. ಗೋಲ್ಡನ್ ಸ್ಟಾರ್ ಗೂ ನಾಯಕಿ ಆಗಿದ್ಲು.. ಈಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾಳೆ.. ಅಷ್ಟಕ್ಕೂ ಯಾರು ಆ ಹೀರೋಯಿನ್ ಅಂತೀರಾ ಈ ಸ್ಟೋರಿ ನೋಡಿ.. ಆಕೆ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ.. ದುಬೈನಿಂದ ಫ್ಲೈಟ್ ನಲ್ಲಿ ಬೆಂಗಳೂರಿಗೆ ಬಂದು ಇಳಿದಿದ್ಲು..
ಹಿರಿಯ ಪೊಲೀಸ್ ಅಧಿಕಾರಿಯ ಸಂಬಂಧಿಕಳಾದ ಆಕೆಗೆ ಪೊಲೀಸ್ ಸೆಕ್ಯುರಿಟಿ ಕೂಡ ಸಿಗೋವಂತಹ ಪ್ರೊಫೈಲ್.. ಆದ್ರೆ ವಿಮಾನದಿಂದ ಇಳೀತಿದ್ದಂಗೆ ಅರೆಸ್ಟ್ ಅಗಿದ್ದಾಳೆ.. ಅದು ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ.. ಹೌದು.. ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರೋ ಆರೋಪದಡಿ ನಟಿ ರನ್ಯಾ ರಾವ್ ರನ್ನ DRI ಅಂದ್ರೆ ಡೈರಕ್ಟೋರೇಟ್ ಆಫ್ ರೆವಿನ್ಯು ಇಂಟಲಿಜೆನ್ಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ..
ಅಂದ್ಹಾಗೆ ಈ ಫೋಟೋದಲ್ಲಿರೋ ಈಕೆಯೇ ನೋಡಿ.. ಈಗಾಗಲೇ ಈ ಹೀರೋಯಿನ್ ಪರಿಚಯ ನಿಮ್ಗೆ ಇದ್ದೇ ಇದೆ.. ಯಾಕಂದ್ತೆ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ರು.. ಆ ಸಿನಿಮಾದಲ್ಲಿ ಎರಡನೇ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ರು.. ಐಪಿಎಸ್ ಅಧಿಕಾಎಇ ರಾಮಚಂದ್ರರಾವ್ ಸಂಬಂಧಿಯಾಗಿರೋ ರನ್ಯಾ ರಾವ್ ಚಿಕ್ಕಮಗಳೂರು ಮೂಲದವ್ರು..
ಮಾಣಿಕ್ಯ ಸಿನಿಮಾದ ಮೂಲಕವೇ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದ ನಟಿ ರನ್ಯಾ ರಾವ್ ನಂತರ ತಮಿಳಿನ ವಾಘಾ ಅನ್ನೋ ಸನಿಮಾದಲ್ಲಿಯೂ ನಟನೆ ಮಾಡಿದ್ರು ನಂತರ 2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಸಿನಿಮಾದಲ್ಲಿ ಕಾಣಿಸಿಕೊಂಡಾಕೆ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡ್ರು.. ಒಂದಷ್ಟು ಬ್ಯುಸಿನೆಸ್ ಮಾಡಿಕೊಂಡಿದ್ರು.. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ರು..
ಬ್ಯುಸಿನೆಸ್ ನಲ್ಲಿ ಬ್ಯುಸಿ ಆಗಿದ್ದ ರನ್ಯಾ ರಾವ್ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡಿದ್ರು.. ಇತ್ತೀಚೆಗೆ ದುಬೈಗೆ ಹೋಗಿದ್ದ ರನ್ಯಾ ರಾವ್ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಇಳಿದಿದ್ರು.. ದುಬೈ ನಿಂದ ಬರುವಾಗ ಇಮಿಗ್ರೇಷನ್ ಚೆಕ್ಕಿಂಗ್ ವೇಳೆ ಸುಮಾರು 14.8kg ಚಿನ್ನ ಸಿಕ್ಕಿದ್ದು, ಕೂಡಲೇ DRI ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.. ಕೂಡಲೇ DRIವಶಕ್ಕೆ ಪಡೆದು ಕರ್ಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದಾರೆ..
ಸದ್ಯ ನಾಗವಾರದ ಬಳಿಯ ಡಿಆರ್ ಐ ಕಚೇರಿಯಲ್ಲಿ ಇಟ್ಟು ವಿಚಾರಣೆ ನಡೆಸಲಾಗ್ತಿದೆ.. ಸಿಕ್ಕಿರೋ ಚಿನ್ನ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಆರೋಪ ಸಂಬಂಧ ಮಾಹಿತಿ ಕೆದಕ್ತಿದ್ದಾರೆ.. ಆ ಚಿನ್ನ ಇವ್ರ ಕೈಗೆ ಹೇಗೆ ಬಂತು.. ದಾಖಲೆ ಇಲ್ಲದಿದ್ರೂ ಯಾಕೆ ಸಾಗಿಸ್ತಿದ್ದಾರೆ..? ಅನ್ನೋದ್ರ ಬಗದಗೆ ತನಿಖೆ ನಡೆಸ್ತಿದ್ದಾರೆ.. ರೀಸೆಂಟ್ ಟೈಮಲ್ಲಿ ಮೂರು ಬಾರಿ ದುಬೈಗೆ ನಟಿ ಹೋಗಿ ಬಂದಿರೋದು ಗೊತ್ತಾಗಿದ್ದು ಆಗಲೂ ಈ ರೀತಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ರಾ ಅನ್ನೋ ಅನುಮಾನ ಮೂಡಿದೆ.. ಸದ್ಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿಯನ್ನ ತೀವ್ರ ವಿಚಾರಣೆ ಮಾಡಲಾಗ್ತಿದ್ದು ನಿಜಕ್ಕೂ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ನಟಿ ಭಾಗಿಯಾಗಿದ್ದಾರಾ..? ಆಕೆ ಬಳಿ ಸಿಕ್ಕಿರೋ ಗೋಲ್ಡ್ ಕಥೆ ಏನು.. ಎಲ್ಲಾ ತನಿಖೆ ನಂತರವೇ ಗೊತ್ತಾಗಬೇಕು..