ಬಾಗಲಕೋಟೆ : ಕವಿ ರನ್ನನ ಗತವೈಭವ ಸಾರುವ ರನ್ನವೈಭವ ಕಾರ್ಯಕ್ರಮ ಜನಮನಸೆಳೆಯುತ್ತಿದೆ. ಜಾನಪದ ವಾಹಿನಿಯ ಕಲಾತಂಡಗಳ ಅದ್ದೂರಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು. ರನ್ನಬೆಳಗಲಿಯ ಬಂದಲಕ್ಷ್ಮೀ ದೇವಾಸ್ಥಾನದಿಂದ ಕವಿ ಚಕ್ರವರ್ತಿ ರನ್ನವೇದಿಕೆ ಜನಪದ ತಂಡಗಳ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಜನಪದ ಕೋಲಾಟ, ಡೊಳ್ಳಿನ ವಾದ್ಯ, ಶಹನಾಯಿ, ಸಂಬಾಳ, ಝಾಂಜ್ ಮೇಳ, ಪುರವಂತಿಕೆ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ 30 ವಿವಿಧ ಕಲಾತಂಡಗಳು ಭಾಗಿಯಾಗಿದ್ದು, ಇಳಕಲ್ ಸೀರೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿದಂತೆ ಸರಕಾರಿ ಮಹಿಳಾ ನೌಕರರು ಕೆಂಪು ಹಳದಿ ಬಣ್ಣದ ಸೀರೆ ಉಟ್ಟಿದ್ದು ವಿಶೇಷವಾಗಿತ್ತು.