ಬಾಲಿವುಡ್ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಜೂನಿಯರ್ ಎನ್ಟಿಆರ್ ಜೊತೆ ದೇವರ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಸೌತ್ ನಲ್ಲಿ ಜಾನ್ವಿಗೆ ಅಭಿಮಾನಿಗಳು ಹೆಚ್ಚಿದ್ದಾರೆ. ಇದೀಗ ಮ್ಯಾನ್ಫೋರ್ಸ್ ಕಾಂಡೋಮ್ ಕಂಪನಿಯ ಎಂಡಿ ಹಾಗೂ ಸಹ ಸಂಸ್ಥಾಪಕ ರಾಜೀವ್ ಜುನೇಜಾ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ.
ಈ ಕಂಪನಿಯ ಕಾಂಡೋಮ್ ಜಾಹೀರಾತಿಗೆ ಮೊದಲು ಸನ್ನಿ ಲಿಯೋನ್ ಪ್ರಚಾರ ರಾಯಭಾರಿ ಆಗಿದ್ದರು. ಇತ್ತೀಚೆಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು ಆಯ್ಕೆ ಮಾಡಲಾಯಿತು. ಬೇರೆ ಯಾರು ಸೂಕ್ತ ಎಂದು ಕೇಳಿದ್ದಕ್ಕೆ ಜಾನ್ವಿ ಕಪೂರ್ ಹಾಗೂ ರಣಬೀರ್ ಕಪೂರ್ ಹೆಸರನ್ನು ರಾಜೀವ್ ಜುನೇಜಾ ಹೇಳಿದ್ದಾರೆ.
Swollen Feet: ಪದೇ ಪದೇ ಪಾದಗಳು ಊದಿಕೊಳ್ಳುತ್ತವೆಯೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು
‘ಜಾನ್ವಿ ಕಪೂರ್ ಅವರು ಕಾಂಡೋಮ್ ಜಾಹೀರಾತಿಗೆ ಲಾಯಕ್ಕು. ಅವರೇ ಉತ್ತಮ ಆಯ್ಕೆ. ಪುರುಷರಲ್ಲಿ ರಣಬೀರ್ ಕಪೂರ್ ಬೆಸ್ಟ್’ ಎಂದು ರಾಜೀವ್ ಜುನೇಜಾ ಅವರು ಹೇಳಿದ್ದಾರೆ. ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ‘ಇದು ರಾಜೀವ್ ಜುನೇಜಾ ಅವರ ವೈಯಕ್ತಿಯ ಅಭಿಪ್ರಾಯ. ಇದರಲ್ಲಿ ಆಕ್ಷೇಪಾರ್ಹ ಅಂಶ ಏನೂ ಇಲ್ಲ’ ಎಂದು ಕೆಲವರು ಹೇಳಿದ್ದಾರೆ.