ಬಾಲಿವುಡ್ ನಟ ರಣ್ಬೀರ್ ಕಪೂರ್- ಆಲಿಯಾ ಭಟ್ (Aliaa Bhatt) ಜೋಡಿ ಕ್ರಿಸ್ಮಸ್ ದಿನದಂದು ಮಗಳ ಮುಖ ರಿವೀಲ್ ಮಾಡಿದ್ದಾರೆ. ಕೊನೆಗೂ ಮಗಳ ಮುಖ ರಿವೀಲ್ ಮಾಡುವ ಮೂಲಕ ಫ್ಯಾನ್ಸ್ಗೆ ಸಿಹಿಸುದ್ದಿ ನೀಡಿದ್ದಾರೆ.
2022ರಲ್ಲಿ ರಣ್ಬೀರ್-ಆಲಿಯಾ ಮದುವೆಯಾಗಿದ್ದರು. ಹಲವು ವರ್ಷಗಳು ಪ್ರೀತಿಸಿ ದಾಂಪತ್ಯದ ಮುದ್ರೆ ಒತ್ತಿದ್ದರು. ಕಳೆದ ವರ್ಷ ನವೆಂಬರ್ 6ರಂದು ರಾಹಾಗೆ (Raha) ಆಲಿಯಾ ಭಟ್ ಜನ್ಮ ನೀಡಿದ್ದರು. ಮಗಳ ಹೆಸರನ್ನ ರಿವೀಲ್ (Reveal) ಮಾಡಿದ್ದು ಬಿಟ್ಟರೇ, ಮುಖವನ್ನು ಎಲ್ಲೂ ತೋರಿಸಿರಲಿಲ್ಲ
ರಾಹಾ ಮುಖದಲ್ಲಿ ನೀಲಿ ಕಣ್ಣುಗಳು ಹೈಲೆಟ್ ಆಗಿದ್ದು, ಮುದ್ದು ಮದ್ದಾಗಿದ್ದಾಳೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ರಾಹಾ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈಗ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಗಳ ಜೊತೆಗಿನ ರಣ್ಬೀರ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸದ್ದು ಮಾಡುತ್ತಿವೆ.
ಮಗಳ ಜೊತೆ ರಣ್ಬೀರ್ (Ranbir Kapoor) ದಂಪತಿ ಕ್ರಿಸ್ಮಸ್ ಪಾರ್ಟಿ ಮಾಡಿದ್ದಾರೆ. ಸದ್ಯ ರಾಹಾ (Raha) ಲುಕ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಾಹಾ ಪೋಸ್ ನೋಡಿ ತಂದೆಗೆ ತಕ್ಕ ಮಗಳು ಎಂದು ಫ್ಯಾನ್ಸ್ ಹಾಡಿ ಹೊಗಳುತ್ತಿದ್ದಾರೆ.