ಬಾಗಲಕೋಟೆ: ಅಯೋಧ್ಯೆಯಲ್ಲಿ ಶ್ರೀ ಶ್ರೀ ರಾಮ್ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿಯ ಶ್ರೀ ಮಾರುತೇಶ್ವರ ಹಾಗೂ ಶ್ರೀ ರಾಮ್ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಪಂ ಮಾಜಿ ಸದಸ್ಯ ಗುರುಪಾದಯ್ಯ ಮರಡಿಮಠ ಮಾತನಾಡಿ ಶತಮಾನಗಳ ಕನಸು ಇಂದು ಈಡೇರುವ ಮೂಲಕ ಇಡೀ ಭಾರತ ದೇಶವೆ ಶ್ರೀ ರಾಮನ ಜಪದಲ್ಲಿ ತೊಡಗಿದ್ದು ನಿಜಕ್ಕೂ ಸಂತಸ ತಂದಿದೆ ಎಂದರು,ದೇಶದಲ್ಲಿ ಪ್ರತಿಯೊಂದು ಗ್ರಾಮ,ನಗರ ಹಾಗೂ ಪಟ್ಟಣಗಳಲ್ಲಿ ಶ್ರೀ ರಾಮ್ ದೇವರ ಪ್ರತಿಷ್ಠಾಪನೆ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ನಿಜಕ್ಕೂ ಇತಿಹಾಸ ನಿರ್ಮಾಣವಾಗಿದೆ ಎಂದರು,
ಗ್ರಾಮದ ಶ್ರೀ ಮಾರುತೇಶ್ವರನ ಹಾಗೂ ಶ್ರೀ ರಾಮ್ ಮಂದಿರದಲ್ಲಿ ಅನ್ನಸಂತರ್ಪಣೆ,ಜಾಗರಣೆ ವಿವಿಧ ಪೂಜೆಗಳನ್ನು ನಡೆಸುವ ಮೂಲಕ ಗ್ರಾಮಸ್ಥರು ರಾಮ್ ನಾಮದಲ್ಲಿ ತೊಡಗುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ಧೇವೆ ಎಂದು ಹೇಳಿದರು ಸಾನಿಧ್ಯವನ್ನು ಬಂಡಿಗಣಿಯ ಶ್ರೀ ಅನ್ನದಾನೇಶ್ವರ ಸ್ವಾಮೀಜಿಯವರು ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಂ ಆರ್ ವಾಲಿ,ಮಹಾಂತೇಶ ಬಿದರಿ,ಆನಂದ ಕಂಪು,ದಾನಪ್ಪ ಆಸಂಗಿ,ಸಿದ್ದು ಲೆಂಡಿ,ಬಸವರಾಜ ಗಣಿ,ಮಲ್ಲಪ್ಪ ಮಗದುಮ್,ಗಿರೀಶ್ ಪಟ್ಟಣಶೆಟ್ಟಿ,ಗಂಗಪ್ಪ ವಾಲಿ,ಗಂಗಪ್ಪ ಅಮ್ಮಲಜೇರಿ, ಶ್ರೀಶೈಲ ಗಣಿ,ಸಿದ್ದು ಕಂಚು,ವಿಠ್ಠಲ ಜನವಾಡ,ಅಲ್ಲಪ್ಪ ಮುಗಳಖೋಡ,ಈರಪ್ಪ ಕಡಕಬಾವಿ ಲಕ್ಷ್ಮಣ ಸವದಿ,,ಈರಪ್ಪ ವಾಲಿ,ಶೇಖರ ಕಾಂತಿ ಹಣಮಂತ ಸವದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ