ಬೆಂಗಳೂರು:- ರಾಮೇಶ್ವರಂ ಕೆಫೆ ಸ್ಪೋಟ ಕೇಸ್ ಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಬ NIA ಅರೆಸ್ಟ್ ಮಾಡಿದೆ.
ಮುಜಾಮುಲ್ ಶರೀಫ್ ಎನ್ನುವಾತನನ್ನು ಇಂದು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದೆ. ಈ ಬಗ್ಗೆ ಎನ್ಐಎ ಟ್ವೀಟ್ ಮಾಡಿದ್ದು, ಪ್ರಮುಖ ಆರೋಪಿಯ ಬಂಧನದ ಬಗ್ಗೆ ಖಚಿತಪಡಿಸಿದೆ.
ಮೋದಿ ಮತ್ತೋಮ್ಮೆ ಪ್ರಧಾನಿಯಾಗುವುದು ನಿಶ್ಚಿತ -ಪಿ ಸಿ ಗದ್ದಿಗೌಡರವರಿಗೆ!
ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ದಾಳಿ ಮಾಡಿದ ನಂತರ ಮುಜಾಮಿಲ್ ಶರೀಫ್ ನನ್ನು ಬಂಧಿಸಲಾಗಿದೆ ಎಂದು ಎನ್ಐ ಟ್ವೀಟ್ನಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಮುಜಾಮಿಲ್ ಶರೀಫ್ ಕೀ ಕಾಂನ್ಸಪರೇಟರ್ ಆಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಇನ್ನು ಬಂಧನದ ವೇಳೆ ಈತನ ಬಳಿ ಇದ್ದ ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ.
ಎನ್ಐಎ ಅಧಿಕಾರಿಗಳು ಕರ್ನಾಟಕ ಸೇರಿದಂತೆ ವಿವಿದೆಡೆ ಬಳಿಕ ಕೀ ಕಾಂನ್ಸಪರೇಟರ್ ಆಗಿದ್ದ ಆರೋಪಿ ಮುಜಾಮಿಲ್ ಶರೀಫ್ನನ್ನು ಬಂಧಿಸಿದ್ದಾರೆ