ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒನ್ನೊಂದೇ ಮಾಹಿತಿಗಳು ಲಭ್ಯವಾಗ್ತಿದೆ.
Chaluvarayaswamy: ಮೈಸೂರಿನಲ್ಲಿ ಚಲುವರಾಯಸ್ವಾಮಿ ಮೇಲೆ ಹಲ್ಲೆ!? ಗಲಾಟೆ ಬಗ್ಗೆ ಸಚಿವರು ಹೇಳಿದ್ದಿಷ್ಟು!
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ದೋಷಾರೋಪ ಪಟ್ಟಿಯಲ್ಲಿ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದೆ.
ಈ ಕೃತ್ಯದ ಹಿಂದೆ ಆರು ಉಗ್ರರ ಕೈವಾಡವಿದ್ದು, ಇವರು ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕದಲ್ಲಿ ಇದ್ದರು ಎಂದು ಉಲ್ಲೇಖಿಸಲಾಗಿದೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸಲ್ಲಿ ಪ್ರಮುಖ ಆರೋಪಿ ಆಗಿರುವ ತಾಹ ಮೂಲತಃ ಶಿವಮೊಗ್ಗದವನಾಗಿದ್ದು, ಐಸಿಸ್ ಜೊತೆ ನಿರಂತರ ಸಂಪರ್ಕದಲ್ಲಿದ್ದನು. 2020ರಿಂದಲೂ ಐಸಿಸ್ ಜೊತೆ ಸಂಪರ್ಕದಲ್ಲಿದ್ದ ಮತೀನ್ ತಾಹ, ಸದ್ಯ ಎಲ್ಲ ಉಸ್ತುವಾರಿ ಜೊತೆಗೆ ಹಣಕಾಸು ವರ್ಗಾವಣೆ ಕೆಲಸ ಕೂಡ ನಿರ್ವಹಣೆ ಮಾಡುತ್ತಿದ್ದನು. ಅಬ್ದುಲ್ ಮತೀನ್ ತಾಹ ಟೆಕ್ನಿಕಲ್ ಆಗಿ ಫಾಸ್ಟ್ ಆಗಿದ್ದ ಕಾರಣಕ್ಕೆ ಈತನಿಗೆ ಐಸಿಸ್ ಉಸ್ತುವಾರಿ ವಹಿಸಿತ್ತು. ರಾಮೇಶ್ವರಂ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಶಿವಮೊಗ್ಗ ಸರಣಿ ಬೈಕ್ಗಳಿಗೆ ಬೆಂಕಿ ಹಚ್ಚಿದ ಹಿಂದಿನ ಕೈ ಇವನೆ ಎಂದು ತಿಳಿದುಬಂದಿದೆ.
ಉಗ್ರ ಮಾಜ್ ಮುನೀರ್ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹ ಮೂಲಕ ಮೊದಲಿಗೆ ಅಲ್ ಹಿಂದ್ ಟ್ರಸ್ಟ್ಗೆ 2018ರಲ್ಲಿ ಸೇರ್ಪಡೆಯಾಗಿದ್ದನು. ಅಲ್ ಹಿಂದ್ ಟ್ರಸ್ಟ್ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಫ್ಲಾನ್ ಮಾಡುತ್ತಿದ್ದನು. 2018ರಲ್ಲೇ ಅಲ್ ಹಿಂದ್ ಟ್ರಸ್ಟ್ ಮೇಲೆ ಕೇಸ್ ದಾಖಲಾಗಿತ್ತು. ಈತನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಸರಣಿ ಬೈಕ್ಗಳಿಗೆ ಬೆಂಕಿ ಕೃತ್ಯದಲ್ಲಿ ಭಾಗಿಯಾಗಿದ್ದನು.
ಮುಜಾಮಿಲ್ ಶರೀಫ್ ಕೂಡ ಅಬ್ದುಲ್ ಮತೀನ್ ತಾಹ ಮೂಲಕವಾಗಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಐಸಿಸ್ ಈತನಿಗೂ ಭಯೋತ್ಪಾದಕ ಕೃತ್ಯದ ಟಾಸ್ಕ್ ನೀಡಿತ್ತು. ಮೆಜೆಸ್ಟಿಕ್ ಹಾಗೂ ಯಶವಂತಪುರದಲ್ಲಿ ಬಸ್ ಸ್ಫೋಟಗೊಳಿಸುವಂತೆ ಟಾಸ್ಕ್ ನೀಡಲಾಗಿತ್ತು.
ಮೊಹಮದ್ ಶಾರೀಕ್ ಕೂಡ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಬೈಕ್ಗಳ ಸ್ಪೋಟ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೃತ್ಯದ ಹಿಂದೆ ಈತನ ಕೈವಾಡವಿದೆ
ಮುಸಾವೀರ್ ಹುಸೇನ್ ಶಾಜೀಬ್ ಕೂಡ ಐಸಿಸ್ ಜೊತೆ ನಂಟು ಹೊಂದಿದ್ದನು. ಮುಸಾವೀರ್ ಹುಸೇನ್ ಶಾಜೀಬ್ ಶಾರಿಕ್ ಜೊತೆಗೂಡಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದನು.
ಅರಾಫತ್ ಅಲಿ ಮೇಲಿನ ಐದೂ ಜನರಿಗೆ ಹಣಕಾಸು ಸಹಾಯ ಮಾಡುತ್ತಿದ್ದನು. ತಾಹ ಹೇಳಿದಂತೆ ಹಣ ಸಹಾಯ ಮಾಡುವುದು ಈತನ ಕೆಲಸವಾಗಿತ್ತು. ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.