ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಕೇಸ್ ಗೆ ಸಂಬಂಧಿಸಿದಂತೆ CCTVಯಲ್ಲಿ ಶಂಕಿತನ ಚಲನವಲನ ಸೆರೆಯಾಗಿದೆ.
ಆರೋಪಿ ಹಾಕಿರುವ ಬಿಳಿ ಬಣ್ಣದ ಹ್ಯಾಟ್ ಮೇಲೆ ನಂಬರ್ 10 ಎಂದು ನಮೂದಿಸಲಾಗಿದೆ. ಸದ್ಯ ಆರೋಪಿಗಾಗಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ -ರಾಜ್ಯಾದ್ಯಂತ ಖಾಕಿ ಹೈ ಅಲರ್ಟ್!
ಈ ಹಿನ್ನೆಲೆಯಲ್ಲಿ ಇನ್ನುಳಿದ ನಗರದ ಬೇರೆ ಬೇರೆ ಬ್ರ್ಯಾಂಚ್ ಇರುವ ಕಡೆ ಜನರು ಫುಲ್ ಅಲರ್ಟ್ ಆಗಿ ಹೆದರಿ ಇಂದು ಕೆಪೇಗೆ ಬಂದಿರುವುದೇ ಕಡಿಮೆಯಾಗಿದೆ.
ಹಾಗೆ ಕೆಫೆಯ ರಾಜಾಜಿನಗರ ಬ್ರ್ಯಾಂಚ್ ಸೇರಿದಂತೆ ಇಂದಿರಾನಗರ ಮತ್ತು ಜೆಪಿ ನಗರದಲ್ಲೂ ಕೆಫೆಯ ಬ್ರ್ಯಾಂಚ್ ಗಳಿವೆ. ಶನಿವಾರಗಳಂದು ರಜಾ ದಿನವಾಗಿರುವುದರಿಂದ ರಾಜಾಜಿನಗರದ ಈ ಕೆಫೆ ಗ್ರಾಹಕರಿಂದ ಗಿಜಿಗುಡುತಿತ್ತು, ಅದರೆ ಇವತ್ತು ಎಂದಿನ ಅರ್ಧದಷ್ಟು ಗ್ರಾಹಕರು ಕೂಡ ಇಲ್ಲಿ ಕಾಣಸಿಗರು. ಅದ್ಕಕ್ಕೇ ನಾವು ಹೇಳಿದ್ದು, ಬಾಂಬ್ ಸ್ಫೋಟ ಜನರಲ್ಲಿ ಸೃಷ್ಟಿಸುವ ಆತಂಕವೇ ಅಂಥದ್ದು. ಬೇರೆ ಬ್ರ್ಯಾಂಚ್ ಗಳಲ್ಲೂ ವ್ಯಾಪಾರ ತಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)