ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೆ. ಅಧ್ಯಕ್ಷ ಚೇಂಜ್ ಆಗಿದ್ರೇ ಓಕೆ ಇಲ್ಲವಾದ್ರೂ ಪಕ್ಷ ಸಂಘಟನೆ ಮಾಡ್ತೇವಿ ಎಂದಿದ್ದಾರೆ.. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಇಂದಿಗೂ ಅವರ ಮೇಲೆ ಗೌರವ ಇದೆ. ಆದ್ರೇ ನೀನು ಸುಳ್ಳು ಹೇಳುವುದು ಬಿಡು ಎಂದು ಕಿಡಿಕಾರಿದ್ರು..
ಇನ್ನು ಬಿವೈ ವಿಜಯೆಂದ್ರ ಸವಾಲ್ ಎಸೆದಿದ್ದರ ಬಗ್ಗೆ ಮಾತನಾಡಿ, ನಾನು ಶಿಕಾರಿಪುರಕ್ಕೆ ಬರ್ತೇನಿ, ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡ್ತೇನಿ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನು ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲಾ, ಗನ್ ಮ್ಯಾನ್ ಬರಲ್ಲ ನಾನು ಒಬ್ಬನೇ ಬರ್ತೇನಿ. ಅಲ್ಲಿಂದ ಪ್ರವಾಸ ಆರಂಭ ಮಾಡುತ್ತೇನೆ ತಡಿ ನೋಡೋಣ ಎಂದು ಚಾಲೆಂಜ್ ಹಾಕಿದ್ದಾರೆ . ನಿನ್ನ ಬೇಕಾದ್ರೇ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಶಕ್ತಿ ನನಗಿದೆ. ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನು ಅಲ್ಲಾ. ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ. ವಿಜಯೇಂದ್ರ ಬೆನ್ನು ಹತ್ರಿದ್ರೆ ಯಡಿಯೂರಪ್ಪ ನವರೇ ಹಾಳಾಗ್ತಿರಿ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನು ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೇ ಸೈಕಲ್ ಮೇಲೆ ಓಡಾಡಿದೀನಿ ಅಂತಾ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದ್ದೀರಿ. ಇದನ್ನ ನೀವು ಹೇಳಬೇಡಿ ಅವಮಾನ ಆಗುತ್ತೆ. ವಾಜಪೇಯಿ, ಮೋದಿಯವರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ, ನೀವು ಎನೇನೂ ತಗೊಂಡೀರಿ ಎಂದು ಬಿಎಸ್ವೈ ವಿರುದ್ಧವೂ ವಾಗ್ಧಾಳಿ ನಡೆಸಿದರು. ಒಬ್ಬ ಬಹುಸಂಖ್ಯಾತ ಯತ್ನಾಳ್ ಇದಾರೆ ಅದಕ್ಕಾಗಿ ಅವರನ್ನ ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ಆದರೆ ಪಕ್ಷ ಅಂತಾ ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡ್ತೇವಿ. 2028ಕ್ಕೆ ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ ಎಂದರು..
ಇದೇ ವೇಳೆ ಗ್ಯಾರಂಟಿ ಸ್ಕೀಂನಿಂದ ರಾಜ್ಯ ಹಿಂದುಳಿಯುತ್ತೆ ಅನ್ನೋದು ತಪ್ಪು ಕಲ್ಪನೆ. ಗ್ಯಾರಂಟಿ ಸ್ಕೀಂಗೆ ಎಪ್ಪತ್ತು ಸಾವಿರ ಕೋಟಿ ಖರ್ಚಾಗುತ್ತೆ. ಸಿದ್ದರಾಮಯ್ಯ ನವರು ಇದರ ಎರಡು ಪಟ್ಟು ಟ್ಯಾಕ್ಸ್ ಏರಿಸಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ ಆಗುತ್ತೆ ಅನ್ನೋದು ಸುಳ್ಳು. ಈ ದುಡ್ಡು ಎಲ್ಲಿ ಹೋಗ್ತಿದೆ ಅನ್ನೋದು ಗೊತ್ತಾಗಬೇಕಿದೆ. ಆದ್ರೇ ಈ ಹಣ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತನೆ ಅಗಿದೆ ಗ್ಯಾರಂಟಿ ಹೆಸರಿನಲ್ಲಿ ಟ್ಯಾಕ್ಸ್ ಡಬಲ್ ಮಾಡಿ ಎರಡು ಪಟ್ಟು ಹಣ ಪಡೆಯುತ್ತಿದ್ದೀರಿ. ಹೀಗೆ ಪಡೆದ ಹಣವನ್ನ ಕಾಂಗ್ರೆಸ್ ಹೈಕಮಾಂಡ್ ಗೆ ಕಳುಹಿಸುತ್ತಿದೀರಿ. ಮುಸ್ಲಿಂ, ಎಸ್ಸಿ, ಎಸ್ಟಿ ಯವರನ್ನ ಹೆದರಿಸಿ ವೋಟ್ ಬ್ಯಾಂಕ್ ಮಾಡ್ಕೊಂಡಿದ್ದಾರೆ. ಜಾತಿ ಗಣತಿ ಯಾವಾಗೋ ಬರಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ಯಾಕೆ ಜಾತಿ ಗಣತಿ ಮಾಡಲಿಲ್ಲ ಈಗ ಯಾಕೆ ಜಾತಿ ಗಣತಿ ಬಗ್ಗೆ ಮಾಡ್ತಿದ್ದಾರೆ. ಹಿಂದುಳಿದ ನಾಯಕರಾಗಿ ಸಿದ್ದರಾಮಯ್ಯ ಉಳಿದಿಲ್ಲ. ಸಿದ್ದರಾಮಯ್ಯ ಶಕ್ತಿ ಉಳಿದಿಲ್ಲ ಅಂತಾ ಟೀಕಿಸಿದರು.
ಡಿಕೆಶಿ ಮತ್ತು ಖರ್ಗೆ ಅವರು ಮಾತಾಡಿದ್ರೇ ಸಿದ್ದರಾಮಯ್ಯ ಹಿಂದೆ ತೆಗೆದುಕೊಳ್ಳುತ್ತಾರೆ. ಈಗ ವೇಣುಗೋಪಾಲ್ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡ್ತಾನೆ. ಆದ್ರೇ ಸಿದ್ದರಾಮಯ್ಯ ಈಗ ಎದ್ದು ನಿಂತಿರುತ್ತಾರೆ. ಸಿದ್ದರಾಮಯ್ಯ ರಾಜ್ಯದ ಹಿತದೃಷ್ಟಿಯಿಂದ ನೀವು ಮೊದಲಿನ ಸಿಎಂ ರಂತೆ ಘರ್ಜನೆ ಮಾಡಬೇಕು.ಕನಕಪುರದ ಮನುಷ್ಯ ಘರ್ಜನೆ ಮಾಡಿದ್ರೇ ಸಿದ್ದರಾಮಯ್ಯ ಹೆದರುತ್ತೀರಿ. ಸಿದ್ದರಾಮಯ್ಯ ಅವರೇ ನೀವು ಎಸ್ಸಿ, ಎಸ್ಟಿ ಅವರಿಗೆ ಹೆದರಿಸುದನ್ನ ಬಿಡಿ ಅಂತಾ ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧವೂ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.