ಕಲಬುರಗಿ:– ಪ್ರತಿಯೊಂದು ಬಡಾವಣೆಯಲ್ಲಿ ಜೋರಾಗಿ ನಡೆದಿದೆ ರಾಮೋತ್ಸವ. ವಿಶೇಷವಾಗಿ ಪ್ರಶಾಂತ ನಗರ ಬಡಾವಣೆಯಲ್ಲಿ ಶ್ರೀರಾಮ ದೇವರ ಭವ್ಯ ಮೆರವಣಿಗೆ ಮಾಡಲಾಗಿದ್ದು ನೂರಾರು ಸಂಖ್ಯೆಯ ಭಕ್ತರು ಪಲ್ಲಕ್ಕಿ ಉತ್ಸವ ವೇಳೆ ಭಾಗಿಯಾಗಿ ಪ್ರಭುವಿನ ಆಶೀರ್ವಾದಕ್ಕೆ ಪಾತ್ರರಾದರು.
ಇವತ್ತು ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಚಂದ್ರನ ಸಂಭ್ರಮ ಸಡಗರಕ್ಕೆ ಬಿಸಿಲೂರು ಕಲಬುರಗಿಯಲ್ಲಿಯೂ ರಾಮ ಹನುಮನ ಜಪ ಜೋರಾಗಿದೆ.
ಇದೇವೇಳೆ ಪಂಡಿತ್ ಗುಂಡಾಚಾರ್ ನರಬೋಳಿ ಯವರ ನೇತ್ರತ್ವದಲ್ಲಿ ರಾಮ ತಾರಕ ಹೋಮ ಮಾಡಿದ್ದು ವಿಶೇಷವಾಗಿತ್ತು…