ವಾಷಿಂಗ್ಟನ್: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ರಾಮೋತ್ಸವ(Ayodhya Ram Mandir) ಆಚರಣೆಗೆ ಸಿದ್ಧತೆಗಳು ನಡೆದಿವೆ. ಅಮೆರಿಕ ಒಂದರಲ್ಲೇ 20ಕ್ಕೂ ಹೆಚ್ಚು ಕಡೆ ರಾಮೋತ್ಸವ ನಡೆಯಲಿದೆ.
ಈಗಾಗಲೇ ವಾಷಿಂಗ್ಟನ್ (Washington) ಡಿಸಿ ಸೇರಿ ವಿವಿಧೆಡೆ ಕಾರ್ ರ್ಯಾಲಿಗಳನ್ನು ನಿರ್ವಹಿಸಲಾಗಿದೆ. ಜನವರಿ 22ರಂದು ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮೋತ್ಸವ ವೈಭವ ಕಂಡುಬರಲಿದೆ. ಫ್ರಾನ್ಸ್ ರಾಜಧಾನಿ ಪ್ಯಾರೀಸ್ನಲ್ಲಿ ರಾಮರಥ ಯಾತ್ರೆ ನಿರ್ವಹಿಸಲಾಗುತ್ತದೆ. ಐಫೆಲ್ ಟವರ್ ಬಳಿ ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿಗೀತೆಗಳ ಗಾಯ, ಪ್ರಸಾದ ವಿತರಣೆಗೆ ತಯಾರಿ ನಡೆದಿವೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿಯಲ್ಲಿಯೂ ದೊಡ್ಡಮಟ್ಟದಲ್ಲೇ ಕಾರ್ಯಕ್ರಮ ನಿರ್ವಹಿಸಲು ಹಿಂದೂ ಸಮುದಾಯ ಸಜ್ಜಾಗಿದೆ. ಆಫ್ರಿಕಾದ ಕೀನ್ಯಾ, ಉಗಾಂಡ, ಟಾಂಜೇನಿಯಾ, ಘಾನ, ನೈಜೀರಿಯಾ, ಮೊಜಾಂಬಿಕ್ ಮತ್ತಿತರ ದೇಶಗಳಲ್ಲಿಯೂ ರಾಮೋತ್ಸವ ನಡೆಯಲಿದೆ. ಆದರೆ ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ರಾಮಮಂದಿರ ವಿರೋಧಿ ಪೋಸ್ಟ್ ಗಳು ಕಂಡುಬರುತ್ತಿವೆ
ಇದೇ ಹೊತ್ತಲ್ಲಿ ಪಾಕ್ ಮಾಜಿ ಕ್ರಿಕೆಟಿಗ, ಹಿಂದೂ ಧರ್ಮೀಯ ದಾನೇಶ್ ಕನ್ಹೇರಿಯಾ ರಾಮ ಮಂದಿರ ಬೆಂಬಲಿಸಿ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಎದೆ ತಟ್ಟಿ ಹೇಳುತ್ತಿದ್ದಾರೆ.