ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ದಿನ ಹತ್ತಿರ ಬರುತ್ತಿದ್ದಂತೆ ರಾಮಮಂದಿರ ಆಮಂತ್ರಣ ಮತ್ತು ಮಂತ್ರಾಕ್ಷತೆ ವಿಚಾರದಲ್ಲಿ ಪಾಲಿಟಿಕ್ಸ್ ಜೋರಾಗಿದೆ. ನಾವು ರಾಮಭಕ್ತರು ಎನ್ನುವುದಕ್ಕೆ ಕಾಂಗ್ರೆಸ್ (Congress) ಸಮರ್ಥನೆ ನೀಡಲು ಆರಂಭಿಸಿದೆ.
ನಾವು ಕೂಡ ರಾಮಭಕ್ತರೇ ರಾಮಮಂದಿರಕ್ಕೆ ನಮ್ಮದೂ ಕೊಡುಗೆ ಇದೆ. ರಾಮಮಂದಿರ ಬಾಗಿಲು ತೆಗೆಸಿದ್ದೇ ನಾವು. ಪೂಜೆ ಮಾಡಲು ಅವಕಾಶ ಕೊಟ್ಟಿದ್ದೆ ನಾವು ಎಂದು ಹೇಳಿದೆ.
ಮಹಾತ್ಮ ಗಾಂಧೀಜಿಗಿಂತ (Mahatma Gandhi) ದೊಡ್ಡ ರಾಮಭಕ್ತ ಇದ್ದಾರಾ? ಜನವರಿ 22 ರಂದು ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಅದೇಶಿಸಿರುವುದು ಕಾಂಗ್ರೆಸ್. ಹೀಗೆ ಕಾಂಗ್ರೆಸ್ ಕ್ರೆಡಿಟ್ ಕ್ಲೈಮ್ ವಾರ್ ಶುರು ಮಾಡಿಕೊಂಡಿದೆ. ಈ ಸಂಬಂಧ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಹಾಕಿ ರಾಮ ಮಂದಿರಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯ ಪಟ್ಟಿಯನ್ನು ವಿವರಿಸಿದೆ.
ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ ಎಂದು ಪರಮೇಶ್ವರ್ (Parameshwar) ಹೇಳಿದರೆ ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ ಎಂದು ಡಾ.ಎಂ.ಸಿ ಸುಧಾಕರ್ ತಿಳಿಸಿದ್ದಾರೆ.