ರಕ್ಷಕ್ ಬುಲೆಟ್ (Rakshak Bullet) ಅವರು ಈ ವಾರ ಬಿಗ್ ಬಾಸ್ (Bigg Boss Kannada 10) ಮನೆಯಿಂದ ಔಟ್ (Eliminate) ಆಗಿದ್ದಾರೆ ಎಂದು ವರದಿಯಾಗಿದೆ.
ಎರಡನೇ ವಾರ ರಕ್ಷಕ್ ಬುಲೆಟ್ ಮನೆಯ ಕ್ಯಾಪ್ಟನ್ ಆಗಿದ್ದರು. ‘’ಬುಲೆಟ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಎಂದು ಕಳಿಸಿದರೆ ಇನ್ನೂ ಸೈಕಲ್ ಹೊಡ್ಕೊಂಡ್ ಇದ್ದೀರಾ. ಸ್ಪೀಡು ಸಾಕಾಗುತ್ತಿಲ್ಲ ಬಾಸ್’’ ಎಂದು ಹಿಂದೊಮ್ಮೆ ಪ್ರೇಕ್ಷಕರು ಪತ್ರದ ಮೂಲಕ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಸ್ನೇಕ್ ಶ್ಯಾಮ್, ಗೌರೀಶ್ ಬಳಿಕ ರಕ್ಷಕ್ ಬುಲೆಟ್ ದೊಡ್ಮನೆಯ ಆಟಕ್ಕೆ ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ.
ಮೊದಲನೇ ವಾರ ಅಸಮರ್ಥರ ಗುಂಪಿನೊಂದಿಗೆ ರಕ್ಷಕ್ ತಮ್ಮ ಜರ್ನಿಯನ್ನು ಶುರು ಮಾಡಿದ್ದರು. ʻʻಮೊದಲ ವಾರ ನಾನು ಅಷ್ಟಾಗಿ ನನ್ನನ್ನು ತೊಡಗಿಸಿಕೊಂಡಿಲ್ಲ. ಬರಬರುತ್ತಾ ಅರ್ಥ ಮಾಡಿಕೊಂಡು ಬಂದೆ. ಮೂರನೇ ವಾರ ಕ್ಯಾಪ್ಟನ್ ಕೂಡ ಆದೆ. ಆದರೆ ಸೈಕಲ್ ಗಿಫ್ಟ್ ಸರಿಯಾಗೇ ಇದೆ. ನಾನು ಒಪ್ಪುತ್ತೇನೆʼʼ ಎಂದು ಹೇಳಿದ್ದರು.
ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರಿಗೆ ರಕ್ಷಕ್ ಗೂಬೆ ಎಂದಿದ್ದಕ್ಕೆ ಕಿಚ್ಚ (Sudeep) ರಕ್ಷಕ್ಗೆ ಖಡಕ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಕಿಚ್ಚ ಸುದೀಪ್ ಈ ಬಗ್ಗೆ ರಕ್ಷಕ್ಗೆ ʻ ಕ್ಯಾಪ್ಟನ್ ಆಗಿ ನೀವು ಒಂದು ನಿರ್ಧಾರ ತೆಗೆದುಕೊಂಡು ವಿನಯ್ ಅವರಿಗೆ ಮೈಕಲ್ ಅವರಿಗೆ ಸಹಾಯ ಮಾಡಿ ಅನ್ನಬಹುದಿತ್ತು. ಅಲ್ಲಿ ಸುಮಾರ್ ನಡೀತು. ಕ್ಯಾಪ್ಟನ್ ಆಗಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ನಿಮ್ಮ ನಾಯಕತ್ವಕ್ಕೆ ನೀವು ಲಿಮಿಟ್ ಹಾಕಿಕೊಂಡಿದ್ರಿ. ಹಾಗೇ ನಿಮಗೊಂದು ಮಾತು ಕೇಳ್ತೀನಿ. ನೀವು ಯಾವಾಗಾದ್ರೂ ರೋಡ್ ಅಲ್ಲಿ ಹೋಗುವಾಗ ಗೂಬೆ ಎಂದು ನಿಮ್ಮನ್ನು ಯಾರಾದ್ರೂ ಕರೆದರೆ ಏನ್ ಮಾಡ್ತೀರಾ? ಒಬ್ಬ ಬುಲೆಟ್ ಪ್ರಕಾಶ್ ಮಗನಾಗಿ ನಾನು ನಿಮಗೆ ಕೇಳ್ತಾ ಇದ್ದೇನೆ. ನಿಮ್ಮ ಪ್ರಕಾರ ಇದು ಕಾಮನ್ ವರ್ಡ್ ಅಲ್ವಾ? ಸರಿಯಾದ ಉತ್ತರ ಇದ್ದರೆ ಗೂಬೆ ಅಂತ ಕರೆಸಿಕೊಳ್ಳಲು ರೆಡಿ ಇದ್ದೀರಾ? ಮೊದಲು ಕ್ಯಾಶುವಲ್. ನಂತರ ಈಗೋ ಆಗಿ ಟರ್ನ್ ಆಯ್ತು. ನಿಮಗೆ ಇದು ಓಕೆನಾ? ಎಂದು ಕೇಳಿದ್ದರು. ರಕ್ಷಕ್ ಈ ಬಗ್ಗೆ ಮಾತನಾಡಿ ʻʻಆ ಟೈಮ್ನಲ್ಲಿ ಹಾಗೆ ಮಾತನಾಡಿದೆ. ಆಮೇಲೆ ಗೊತ್ತಾಯಿತು ಅದು ತಪ್ಪು ಅಂತ. ಮಲಗಿದ್ದಾಗ ಹೋಗಿ ಸಾರಿ ಕೇಳಿದೆʼʼಎಂದಿದ್ದರು. ಟಾಸ್ಕ್, ಪಂಚಿಂಗ್ ಡೈಲಾಗ್, ಮತ್ತು ನೇರ ಮಾತುಗಳಲ್ಲಿ ರಕ್ಷಕ್ ಮುಂದಿದ್ದರು.