ಬೆಂಗಳೂರು: ಸ್ಯಾಂಡಲ್ ವುಡ್ನ ಕ್ಯೂಟ್ ಜೋಡಿ ಅಂದರೆ ಯಶ್ ಮತ್ತು ರಾಧಿಕಾ.. ಇತ್ತೀಚಿಗಷ್ಟೇ ನಟಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಧಿಕಾ ಬರ್ತ್ ಡೇ ಪಾರ್ಟಿಯಲ್ಲಿ ರಾಖಿಭಾಯ್ ಪ್ರೀತಿಯ ಮಡದಿಗಾಗಿ ಜೊತೆ ಜೊತೆಯಲ್ಲಿ ಇರುವೆನು ಹೀಗೆ ಎಂದು” ಹಾಡು ಹಾಡಿದ್ದಾರೆ.
ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಅಂದರೆ ನನಗಿಷ್ಟ ; ಕೀರ್ತಿ ಸುರೇಶ್
ಪತಿ ತಮಗಾಗಿ ಹಾಡಿದ ವಿಡಿಯೋವನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಯಾವಾಗಲೂ ಇದು ನಮ್ಮ ಹಾಡು. ಈಗಲೂ ಇದನ್ನು ಕೇಳಿದಾಗ ನನ್ನ ಹೃದಯ ಬಡಿತ ಜೋರಾಗುವುದೆಂದು ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ. ಸದ್ಯ ಈ ಕ್ಯೂಟ್ ಕಫಲ್ನ ಈ ಸ್ವೀಟ್ ಮೂಮೆಂಟ್ ನೋಡಿರೋ ಫ್ಯಾನ್ಸ್ ಮಾತ್ರ ಅಣ್ಣಅತ್ತಿಗೆಯ ಜೋಡಿ ನೂರು ಕಾಲ ಹೀಗೇ ಇರಲಿ ಅಂತಿದ್ದಾರೆ..