ರಾಜ್ ಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಸಂಕ್ರಾತಿ ಹಬ್ಬವನ್ನ ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಸಂಭ್ರಮದಲ್ಲಿರುವ ಧನ್ಯಾ ರಾಮ್ ಲಂಗಾ-ದಾವಣಿ ತೊಟ್ಟು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸುಂದರವಾಗಿರೋ ಲಂಗಾ-ದಾವಣಿ ತೊಟ್ಟು ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿರುವ ಧನ್ಯಾ ರಾಮ್ ಫ್ರೀಹೇರ್ ಬಿಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಆಗಿ ಜ್ಯುವೆಲರಿ ಹಾಕಿರೋ ಧನ್ಯಾ ಇದೇ ಖುಷಿಯಲ್ಲಿ ಕ್ಯಾಮೆರಾಗೆ ಕೆಲವೊಂದಷ್ಟು ಫೋಸ್ ಕೊಟ್ಟಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಈ ಮೂಲಕ ಧನ್ಯಾ ರಾಮ್ಕುಮಾರ್ ಎಲ್ಲರಿಗೂ ಶುಭಾಷಯ ತಿಳಿಸಿದ್ದಾರೆ. ಇದನ್ನ ಸ್ವೀಕರಿಸಿದ ನೆಟ್ಟಿಗರು ಮತ್ತು ಅಭಿಮಾನಿಗಳು ಕಾಮೆಂಟ್ ಬಾಕ್ಸ್ ಅಲ್ಲಿ ಸಂಕ್ರಾಂತಿ ಹಬ್ಬದ ಶುಭಾಷಯ ಹೇಳಿದ್ದಾರೆ.
ಧನ್ಯಾ ರಾಮ್ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾಗಳ ವಿಚಾರಗಳನ್ನ ಈ ಒಂದು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡು ಅಭಿಮಾನಿಗಳಿಗೆ ಅಪ್ಡೇಟ್ ಕೊಡ್ತಾನೇ ಇರ್ತಾರೆ.