ಬೆಂಗಳೂರು;- ಭಾರೀ ಮಳೆಯಿಂದ ತುಂಬಿದ್ದ ರಾಜಕಾಲುವೆ ನೀರನ್ನು ಯಲಹಂಕ ಸಂಚಾರಿ ಪೊಲೀಸರು ನೀರು ಕ್ಲಿಯರ್ ಮಾಡಿದ್ದಾರೆ.
ಯಲಹಂಕ ಸಂಚಾರಿ ಪೊಲೀಸರ ಸಮಯಪ್ರಜ್ಞೆಗೆ ಜನರಿಂದ ಅಭಿನಂಧನೆ ವ್ಯಕ್ತವಾಗಿದೆ. ಕಳೆದ ರಾತ್ರಿ 10ಗಂಟೆಯಿಂದ ಯಲಹಂಕ ಕೆರೆ ಕೋಡಿ ಬಿದ್ದಿದ್ದು, ಯಲಹಂಕ ಕೆರೆ ಕೋಡಿ ಬಿದ್ದ ಪರಿಣಾಮ ತಗ್ಗು ಪ್ರದೇಶ ಕೋಗಿಲು ಸರ್ಕಲ್ ಜಲಾವೃತವಾಗಿದೆ.
ಕೋಗಿಲು ಸರ್ಕಲ್ ಜಲಾವೃತ ಹಿನ್ನಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಯಲಹಂಕ ಸಂಚಾರಿ ಪೊಲೀಸರು ಬಿಬಿಎಂಪಿ ಕೆಲಸ ಮಾಡಿದ್ದಾರೆ. ಚರಂಡಿ ಸ್ಲ್ಯಾಬ್ ಗಳ ನ್ನು ತೆಗೆದು ನೀರು ಹರಿದುಕೊಂಡು ಹೋಗಲು ಕ್ರಮ ಕೈಗೊಂಡಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಜೊತೆ ತಾವೇ ಕುದ್ದು ತಗ್ಗುಪ್ರದೇಶದ ನೀರು ಕ್ಲಿಯರ್ ಅಗಲು ಕ್ರಮ ಕೈಗೊಂಡಿದ್ದಾರೆ.