ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಒನ್ ಅಂಡ್ ಒನ್ಲಿ ರಜನಿಕಾಂತ್ ಭತ್ತಳಿಕೆಯ ಬಹುನಿರೀಕ್ಷಿತ ಸಿನಿಮಾ ಕೂಲಿ ಶೂಟಿಂಗ್ ಮುಕ್ತಾಯಗೊಂಡಿದೆ. ತಲೈವರ್ ಜೊತೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್ ಮಿಸ್ಟರ್ ಫರ್ಪೆಕ್ಷನಿಸ್ಟ್ ಆಮೀರ್ ಖಾನ್, ಟಾಲಿವುಡ್ ಮನ್ಮಥ ನಾಗಾರ್ಜುನ, ಶ್ರುತಿ ಹಾಸನ್, ಪೂಜಾ ಹೆಗ್ಡೆ, ಸತ್ಯರಾಜ್ ಮತ್ತು ಸೌಬಿನ್ ಶಾಹಿರ್ ಅವರಂತಹ ಪವರ್ಫುಲ್ ಸ್ಟಾರ್ಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ಆ್ಯಕ್ಷನ್-ಥ್ರಿಲ್ಲರ್ ಪ್ರಾಜೆಕ್ಟ್ಗೆ ಲೋಕೇಶ್ ಕನಕರಾಜ್ ಸಾರಥಿ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ ಕೂಲಿ ಚಿತ್ರದ ಹೈಲೆಟ್ಸ್. , ಗಿರೀಶ್ ಗಂಗಾಧರನ್ ಛಾಯಾಗ್ರಾಹಣ, ಫಿಲೋಮಿನ್ ರಾಜ್ ಸಂಕಲನ ಚಿತ್ರಕ್ಕಿದೆ.
ಫರ್ ದಿ ಫಸ್ಟ್ ಟೈಮ್ ಡಿಜೆ ಸುಂದ್ರಿ ಪೂಜಾ ಹೆಗ್ಡೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಹೆಜ್ಜೆ ಹಾಕಿದ್ದಾರೆ. ಕೂಲಿ ಸ್ಪೆಷಲ್ ನಂಬರ್ ನಲ್ಲಿ ತಲೈವರ್ ಪೂಜಾ ಡ್ಯಾನ್ಸಿಂಗ್ ಜುಲಗ್ಬಂಧಿ ಹೇಗಿರಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ರಿಲೀಸ್ ಗೂ ಮೊದ್ಲೇ ಕೂಲಿ ಒಟಿಟಿ ರೈಟ್ಸ್ ಬಗ್ಗೆ ಭಾರೀ ಟಾಕ್ ಇದೆ. ಬರೋಬ್ಬರಿ 120 ಕೋಟಿ ರೂ.ಗೆ ‘ಕೂಲಿ’ ಚಿತ್ರದ 5 ಭಾಷೆಗಳ ಓಟಿಟಿ ಡೀಲ್ ಕುದುರಿಸಲಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೂಲಿ’ ಸಿನಿಮಾ ತೆರೆಗೆ ಬರುತ್ತಿದ್ದು, ರಜನಿ-ಲೋಕೇಶ್ ಕಾಂಬೋ ಹೇಗೆಲ್ಲಾ ಮೋಡಿ ಮಾಡಲಿದೆ ಎಂಬ ಕುತೂಹಲ ಸಿನಿಮಾಪ್ರೇಮಿಗಳಲ್ಲಿದೆ. ಚಿನ್ನದ ಕಳ್ಳಸಾಗಣೆಯನ್ನು ಆಧರಿಸಿದ ‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ಗೆ ಜೋಡಿಯಾಗಿ ಯಾರೂ ಇಲ್ಲ ಎಂದು ಹೇಳಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಕೂಲಿ ತೆರೆಯಲ್ಲಿ ಕಮಾಲ್ ಮಾಡಲಿದೆ ಎಂಬ ಮಾಹಿತಿ ಇದೆ. ಕೂಲಿ ಚಿತ್ರೀಕರಣ ಮುಗಿಸಿರುವ ತಲೈವರ್ ಕೆಲ ದಿನಗಳ ಬಳಿಕ ಜೈಲರ್-2 ಅಖಾಡಕ್ಕೆ ಇಳಯಲಿದ್ದಾರೆ ಎನ್ನಲಾಗುತ್ತಿದೆ.