ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾ ಸೆಟ್ನಲ್ಲಿ ತಾವೇ ನಟಿಸಿರುವ ‘ವೆಟ್ಟೈಯಾನ್’ ಸಿನಿಮಾದ ಹಾಡಿಗೆ ಚಿತ್ರತಂಡದ ಜೊತೆ ಹೆಜ್ಜೆ ಹಾಕಿ ರಜನಿಕಾಂತ್ ಸಂಭ್ರಮಿಸಿದ್ದಾರೆ. ಈ ಸ್ಪೆಷಲ್ ವಿಡಿಯೋ ಮೂಲಕ ಫ್ಯಾನ್ಸ್ಗೆ ವಿಶ್ ಮಾಡಿದ್ದಾರೆ.
ಅಂದಹಾಗೆ, ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯಾನ್’ ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ವೆಟ್ಟೈಯಾನ್ ಬಳಗ ಮೊದಲ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡಿತ್ತು.
ವೆಟ್ಟೈಯಾನ್’ ಸಿನಿಮಾದ ‘ಮನಸಿಲಾಯೋ’ ಎಂಬ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹಾಡು ರಿಲೀಸ್ ಮಾಡಲಾಗಿದ್ದು, ಕಲರ್ಫುಲ್ ಸೆಟ್ ನಲ್ಲಿ ತಲೈವ ಜೊತೆ ಮಂಜು ವಾರಿಯರ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದರು. ರಾಕ್ ಸ್ಟಾರ್ ಅನಿರುದ್ಧ ರವಿಚಂದರ್ ಹಾಡಿಗೆ ಟ್ಯೂನ್ ಮಾಡಿರೋದು ವಿಶೇಷ.
ರಜನಿಕಾಂತ್ ಹಾಗೂ ಅನಿರುದ್ಧ ಕಾಂಬೋದಲ್ಲಿ ಬಂದ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಈ ಹಿಂದೆ ಪೆಟ್ಟಾ, ದರ್ಬಾರ್, ಜೈಲರ್ ಬಳಿಕ ಈ ಜೋಡಿ ವೆಟ್ಟೈಯಾನ್ಗಾಗಿ ಒಂದಾಗಿದೆ. ಮನಸಿಲಾಯೋ ಸಿಂಗಿಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಟ್ರೆಂಡಿಂಗ್ನಲ್ಲಿದೆ.