ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ಈ ಪಂದ್ಯವನ್ನು ಗೆದ್ದು ಪ್ಲೇಆಫ್ ತಲುಪುವತ್ತ ಕಣ್ಣಿಟ್ಟಿದ್ದು, ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದ ಸಿಎಸ್ಕೆ ಮತ್ತೆ ತಿರುಗೇಟು ನೀಡಿ ನಾಕೌಟ್ ರೇಸ್ನಲ್ಲಿ ಉಳಿಯಲು ಪ್ರಯತ್ನಿಸುತ್ತಿದೆ.
ಕೇವಲ 141 ರನ್ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಸಿಎಸ್ಕೆ ಯಶಸ್ವಿಯಾಗಿದೆ. ಸಿಎಸ್ಕೆ ಪರ ಸಿಮರ್ಜೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ನಾಲ್ಕು ಓವರ್ ಮಾಡಿ ಕೇವಲ 26 ರನ್ ನೀಡಿದರು. ಇನ್ನು ರವೀಂದ್ರ ಜಡೇಜಾ ಕೂಡ ಅದ್ಭುತ ಬೌಲಿಂಗ್ ಮಾಡಿದರು ನಾಲ್ಕು ಓವರ್ ಮುಗಿಸಿ 24 ರನ್ ನೀಡಿದರು.
ಇನ್ನು ತುಷಾರ್ ದೇಶಪಾಂಡೆ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು. ಇನ್ನು ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 24, ಬಟ್ಲರ್ 21, ಸ್ಯಾಮ್ಸನ್ 15, ಪರಾಗ್ 47, ಧ್ರುವ್ ಜರೇಲ್ 28 ರನ್ಗಳಿಸಿದರು. ಈ ಮೂಲಕ ನಿಗದಿತ 20 ಓವರ್ಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ಕೇವಲ 141 ರನ್ಗೆ ಇನ್ನಿಂಗ್ಸ್ ಮುಗಿಸಿತು.