ಈ ವರ್ಷ ತೆರೆಕಂಡ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಅಪಾರ ಪ್ರಶಂಸೆಗೆ, ಚರ್ಚೆಗೆ ಒಳಗಾದ ಚಿತ್ರ ಟೋಬಿ (Toby) . ರಾಜ್ ಬಿ ಶೆಟ್ಟಿ ((Raj B Shetty)) ಬರೆದು, ನಟಿಸಿದ ದೊಡ್ಡ ವೆಚ್ಚದ ಚಿತ್ರ ಟೋಬಿ ಭಾಷೆಯ ಎಲ್ಲೆಯನ್ನೂ ಮೀರಿ ದೇಶದಾದ್ಯಂತ ಮೆಚ್ಚುಗೆಯನ್ನು ಪಡೆದಿತ್ತು.
ಥಿಯೇಟರ್ ನಲ್ಲಿ ಗೆದ್ದ ಟೋಬಿಯನ್ನು ಒಟಿಟಿಯಲ್ಲಿ ನೋಡಲು ಕಾಯುತ್ತಿದ್ದ ಸಿನಿ ರಸಿಕರಿಗೆ ಹೊಸ ಮಾಹಿತಿಯೊಂದು ಬಂದಿದೆ, ಹೌದು ಟೋಬಿ ಚಿತ್ರ ಇದೇ ಡಿಸೆಂಬರ್ 22 ಕ್ಕೆ ಪ್ರಖ್ಯಾತ ಸೋನಿ ಲಿವ್ ಒಟಿಟಿ ಆ್ಯಪ್ ನಲ್ಲಿ ಬಿಡುಗಡೆಗೊಳ್ಳಲಿದೆ. ಒಟಿಟಿಯಲ್ಲಿ ನೋಡಬೇಕು ಎಂದು ಕಾದವರಿಗೆ ಅವಕಾಶ ಸಿಕ್ಕಿದೆ.
ಪುನೀತ್ ರಾಜ್ ಕುಮಾರ್ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ನ ನಂತರ ಸೋನಿ ಸಂಸ್ಥೆ ಯಲ್ಲಿ ಬಿಡುಗಡೆಗೊಳ್ಳಲಿರುವ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ ಟೋಬಿಗೆ ಸಿಕ್ಕಿದೆ. ಜೇಮ್ಸ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾಗೂ ಸಿಗಲಿದೆ ಎನ್ನುವ ವಿಶ್ವಾಸ ಸಂಸ್ಥೆಯದ್ದು.