ಚಿಕ್ಕೋಡಿ: ಗಡಿ ಭಾಗದ ಜನರು ಬಿಸಲಿನ ಬೇಗೆಯಿಂದ ಬೇಸತ್ತಿದ್ದ ರೈತರಿಗೆ ಮಳೆರಾಯ ತಂಪೆರೆದಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಿಡಿಲು ಗಡುಗು ಸಹಿತ ಮಳೆಯಾಗುತ್ತಿದ್ದು, ಮಳೆರಾಯನ ಆಗಮನದಿಂದ ರೈತ ಮೊಗದಲ್ಲಿ ಮಂದಹಾಸ ಮೂಡಿದೆ.
ಇಂದು ಕೂಡಾ ಮಳೆರಾಯನ ಅರ್ಭಟದ ಜೊತೆಗೆ ಗುಡುಗು ಸಿಡಿಲು ಬಂದಿದರಿಂದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿ ಉರಿದಿದೆ. ಅಳಗವಾಡಿ ಗ್ರಾಮದ ರೈತನ ತೋಟದ ತೆಂಗಿನ ಮೆರಕ್ಕೆ ಸಿಡಿಲು ಹೊಡೆದ ಪರಿಣಾಮ ತೆಂಗಿನ ಮರಕ್ಕೆ ಬೆಂಕಿ ತಗುಲಿದ್ದು, ಅಳಗವಾಡಿ ಗ್ರಾಮದ ಶಾಂತಿನಾಥ ಮಳವಂಕಿ ಅವರಿಗೆ ಸೇರಿದ ತೆಂಗಿನ ಮರವಾಗಿದೆ.