ತುಮಕೂರು: ಜಿಲ್ಲೆಯ ಹಲವು ಕಡೆ ಬುಧವಾರ ಮಧ್ಯಾಹ್ನ ಸಿಡಿಲು ಹಾಗೂ ಭಾರಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿತು.
ಶಿರಾ ತಾಲ್ಲೂಕಿನಲ್ಲಿ ನಿನ್ನೆ ರಾತ್ರಿ ಅಬ್ಬರಿಸಿದ ಮಳೆಯಿಂದ ದ್ವಾರನ ಕುಂಟೆ ಗ್ರಾಮದಲ್ಲಿ ವಿದ್ಯುತ್ ಕಂಬ, ಬೃಹತ್ ಗಾತ್ರದ ಮರ ನೆಲಕ್ಕುರಳಿವೆ. ದ್ವಾರನ ಕುಂಟೆ ಗ್ರಾಮ ದಿಂದ ವಾಜರಹಳ್ಳಿಗೆ ಹೋಗುವ ರಸ್ತೆಯಲ್ಲಿ ಮರ ಹಾಗೂ ಕಂಬ ಉರುಳಿ ಬಿದ್ದಿದ್ದು, ಮಳೆ ಪರಿಣಾಮ ಸಂಚಾರ ದುಸ್ತರವಾಗಿದೆ.