ಉತ್ತರ ಕನ್ನಡ:– ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯಲ್ಲಿ 6 ಕಾಳಜಿ ಕೇಂದ್ರ ಓಪನ್ ಮಾಡಲಾಗಿದೆ. ಅಲ್ಲದೇ NDRF ದೌಡಾಯಿಸಿದ್ದಾರೆ.
ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ಚಿನ್ನ, ಬೆಳ್ಳಿ ಎರಡೂ ಬೆಲೆ ಭರ್ಜರಿ ಹೆಚ್ಚಳ; ಇಲ್ಲಿದೆ ಇಂದಿನ ದರಪಟ್ಟಿ!
ಈ ಬಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 6 ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ . ಹೊನ್ನಾವರದಲ್ಲಿ 4, ಅಂಕೋಲಾ, ಕುಮಟಾದಲ್ಲಿ ತಲಾ ಒಂದು ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ. ಅಲ್ಲಿನವರಿಗೆ ಜಿಲ್ಲಾಡಳಿತದಿಂದಲೇ ಊಟ, ವಸತಿ, ಬಟ್ಟೆ ವ್ಯವಸ್ಥೆ ಮಾಡಿದ್ದೇವೆ ಎಂದರು.
ಒಂದು ತಿಂಗಳಿನಿಂದ ಸುರಿದ ಮಳೆಗೆ ಸಾಕಷ್ಟು ಹಾನಿ ಆಗಿದೆ. ಓರ್ವ ಮಹಿಳೆ, ಜಾನುವಾರು ಸಾವನ್ನಪ್ಪಿದ್ದಾರೆ. ಜೊತೆಗೆ 92 ಮನೆಗಳಿಗೆ ಹಾನಿಯಾಗಿದೆ. ಮುಂದಿನ 3 ರಿಂದ 4 ದಿನಗಳ ಕಾಲ ಮಳೆ ಅಬ್ಬರ ಹೆಚ್ಚಾಗಲಿದೆ. ಹೀಗಾಗಿ ತಲಾ 35 ಜನರ ಎರಡು NDRF ತಂಡ ಜಿಲ್ಲೆಗೆ ಆಗಮಿಸುತ್ತಿದೆ.
ಇಂದು ಬೆಂಗಳೂರಿನಿಂದ ಎನ್ಡಿಆರ್ಎಫ್ ಸಿಬ್ಬಂದಿ ತೆರಳಿದ್ದು, ನಾಳೆ ಕಾರವಾರ, ಕುಮಟಾ, ಅಂಕೋಲಾಗೆ ಆಗಮಿಸಿ ಹೆಚ್ಚು ಮಳೆ ಬೀಳುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ಜೊಯಿಡಾದ ಕನ್ನೇರಿ ಹಾಗೂ ಕದ್ರಾದ ಡ್ಯಾಂ ಮಟ್ಟ ಹೆಚ್ಚಾಗುತ್ತಿದೆ. ಅಲ್ಲಿನ ಜನರ ರಕ್ಷಣೆಗೆ ಈ ತಂಡ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದರು.
ಇನ್ನೂ ಮಳೆಯ ಸಮಸ್ಯೆ ಸಂಭವಿಸಿದಾಗ 1950ಸಂಖ್ಯೆಗೆ ಜನರು ಸಂಪರ್ಕಿಸಬಹುದು ಎಂದರು.