ಗಯಾನಾದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲ್ಲಿದ್ದು, ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ.
ನೀವು ಜಿಯೋ ಬಳಕೆದಾರರಾ!?.. ನಿಮಗೊಂದು ಬ್ಯಾಡ್ ನ್ಯೂಸ್.. ಶೇ.20ರಷ್ಟು ಶುಲ್ಕ ಹೆಚ್ಚಳ!
ಗಯಾನಾದಲ್ಲಿ ಮಳೆ ನಿಂತಿದೆ ಆದರೆ ಟಾಸ್ ಅನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸ್ವಲ್ಪ ಸಮಯದ ನಂತರ ಮೈದಾನವನ್ನು ಪರಿಶೀಲಿಸಿದ ನಂತರ ಅಂಪೈರ್ ತಮ್ಮ ನಿರ್ಧಾರವನ್ನು ನೀಡುತ್ತಾರೆ.
ರಾತ್ರಿ 8.30ಕ್ಕೆ ಅಂಪೈರ್ಗಳು ಮೈದಾನ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಬಂದಿತ್ತು. ಇದೀಗ ಈ ಮಾಹಿತಿ ಹೊರಬಿದ್ದಿದ್ದು, ರಾತ್ರಿ ಒಂಬತ್ತರ ವೇಳೆಗೆ ಅಂಪೈರ್ಗಳು ಮೈದಾನವನ್ನು ಪರಿಶೀಲಿಸಲಿದ್ದಾರೆ. ಇದಾದ ಬಳಿಕ ಟಾಸ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಟಿ20 ವಿಶ್ವಕಪ್ 2024 ರ ಎರಡನೇ ಸೆಮಿಫೈನಲ್ ಗಯಾನಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲ್ಲಿದೆ. ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ನಲ್ಲಿ ವಿಜೇತ ತಂಡವು ಬಾರ್ಬಡೋಸ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)