ಬೆಂಗಳೂರು:- ಬೆಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿರುವ ಹಿನ್ನೆಲೆ, 30ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ದೀಪಾವಳಿಗೆ ದಿನಗಣನೆ ಆರಂಭ: ಸಾರ್ವಜನಿಕರಿಗೆ ಜಾಗೃತಿ ಸಂದೇಶ ರವಾನಿಸಿದ ಅರಣ್ಯ ಸಚಿವ!
ದೇವನಹಳ್ಳಿ ಸುತ್ತಮುತ್ತ ಸುರಿದ ಧಾರಾಕಾರ ಮಳೆಗೆ ಅರ್ಧ ಗಂಟೆಗೂ ಹೆಚ್ಚು 30ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ನಗರದಲ್ಲಿ ಇಂದು ಎಲ್ಲೆಡೆ ಧಾರಾಕಾರ ಮಳೆ ಆಗಿದೆ. ಮಳೆ ಬರ್ತಿದ್ದಂತೆ ರಸ್ತೆಗಳು ಜಲಾವೃತಗೊಂಡಿವೆ. ಜೊತೆಗೆ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ಈ ಮಧ್ಯೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಟೇಕ್ ಆಪ್ನಲ್ಲಿ ವಿಳಂಬ ಉಂಟಾಗಿದೆ.
ದೆಹಲಿ, ಕೊಲ್ಕತ್ತಾ, ಮುಂಬೈ ಸೇರಿದಂತೆ ದೇಶದ ವಿವಿಧೆಡೆಗೆ ವಿಮಾನಗಳು ತೆರಳಬೇಕಿತ್ತು. ಮಳೆ ಸುರಿಯುತ್ತಿರುವುದರಿಂದ ಟೇಕಾಫ್, ಲ್ಯಾಂಡಿಂಗ್ನಲ್ಲಿ ವ್ಯತ್ಯಯವಾಗಿದೆ.