ಸತತ ಮೂರು ದಿನಗಳಿಂದ ಮಳೆ ಸುರಿದ ಪರಿಣಾಮ ಕಲಬುರಗಿ ಜಿಲ್ಲೆ ಮಳಖೇಡದ ಐತಿಹಾಸಿಕ ಕೋಟೆ ಮತ್ತೊಮ್ಮೆ ನೆಲಕ್ಕುರುಳಿದೆ. ಸೇಡಂ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮತ್ತು ಬುಧವಾರ ರಾತ್ರಿ ಜೋರು ಮಳೆಯಾಗಿದೆ.
ಸತತ ಮಳೆಗೆ ಐತಿಹಾಸಿಕ ಮಳಖೇಡ ಕೋಟೆ ಗೋಡೆ ತೇವಗೊಂಡು ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ದಿಢೀರ್ ಕುಸಿದು ನೆಲಕ್ಕುರಳಿದೆ. ಹೀಗಾಗಿ ಸುತ್ತಮುತ್ತಲ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಕಳೆದ ತಿಂಗಳ 31ರಂದು ಸಹ ಸತತ ಮಳೆಗೆ ಕೋಟೆಯ ಒಂದು ಗೋಡೆ ಉರುಳಿ ಬಿದ್ದಿತ್ತು.