ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರಿ ಮಳೆ ಎಫೆಕ್ಟ್ ಹಿನ್ನೆಲೆ, ಕಮಲನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿದೆ.
ಲಾಯರ್ ಜಗದೀಶ್ ಮನೆ ಮೇಲೆ ದಾಳಿ:ಕಮಿಷನರ್ ಗೆ ದೂರು ಕೊಡಲು ಮುಂದಾದ ಬಿಗ್ ಬಾಸ್ ಸ್ಪರ್ಧಿ!
ಮನೆಯ ಕೆಳಗೆ ನೀರಿನ ಸಂಪ್ ಕುಸಿದು ಆತಂಕ ಉಂಟಾಗಿದೆ. ಸಂಪ್ ನ ಪಕ್ಕದಲ್ಲಿಯೇ ಇದ್ದ ಚರಂಡಿ, ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಐದು ಕುಟುಂಬಗಳು ಇದ್ದು, ಪಕ್ಕದ ಮನೆಯ ಮೂರು ಮನೆಯ ಕುಟುಂಬಗಳು ಸೇರಿ
ಒಟ್ಟು ೮ ಮನೆಯವರನ್ನ ಪಾಲಿಕೆ ಶಿಫ್ಟ್ ಮಾಡಿದೆ.
ಸ್ಥಳೀಯ ಶಾಸಕ ಗೋಪಾಲಯ್ಯ ಸೂಚನೆ ಮೇರೆಗೆ ಪಕ್ಕದ ಬಿಬಿಎಂಪಿ ಸಮುದಾಯ ಭವನಕ್ಕೆ ಶಿಫ್ಟ್ ಮಾಡಲಾಗಿದೆ. ಅಂಬೇಡ್ಕರ್ ಸಮುದಾಯ ಭವನದಲ್ಲಿರುವ ಎರಡು ಕುಟುಂಬಗಳು ಆಶ್ರಯ ಪಡೆದಿವೆ.
ಹಿಟಾಚಿ ಮೂಲಕ ಮನೆ ತೆರವು ಮಾಡಲು ಸಿದ್ದತೆ ಮಾಡಲಾಗಿದೆ. ತಿಮ್ಮಪ್ಪ ಎಂಬುವರು 25 ವರ್ಷಗಳ ಹಿಂದೆ ಮನೆ ನಿರ್ಮಾಣ ಮಾಡಿದ್ರು. ಅಕ್ಕಪಕ್ಕದ ಮನೆಯರಿಗೆ ತೊಂದರೆಯಾಗದಂತೆ ತೆರವು ಮಾಡಲಾಗಿದೆ. ಸ್ಥಳದಲ್ಲೇ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಕಮಲನಗರದ ಮೂರನೇ ಅಡ್ಡರಸ್ತೆಯಲ್ಲಿರುವ ಮನೆ ಇದಾಗಿದ್ದು, ಸೆಕೆಂಡರಿ ಡ್ರೈನ್ ಮೇಲೆ ಮನೆ ಕಟ್ಟಲಾಗಿದೆ. ಮನೆ ತೆರವು ಮಾಡಿದ ನಂತರ ಡ್ರೈನ್ ಕೆಳಗಡೆ ಎಷ್ಟು ಡ್ಯಾಮೆಜ್ ಆಗಿದೆ ಎಂದು ತಿಳಿದು ಬರುತ್ತದೆ.