ವಿಶಾಖಪಟ್ಟಣಂ:- ಭಾರೀ ಮಳೆಯಿಂದ ವಿಶಾಖಪಟ್ಟಣಂಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಜಲಾವೃತ ಆಗಿದ್ದು, ಬಸ್ ನಿಲ್ದಾಣದಲ್ಲಿ ಮೂರ್ನಾಲ್ಕು ಅಡಿಗಳಷ್ಟು ಮಳೆನೀರು ನಿಂತಿದೆ.
ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗಿಲ್ಲ: ನಾನು ಸಾಯ್ತೀನಿ ಎಂದು ಹುಡುಗ ನಾಪತ್ತೆ!
ಮಳೆಯ ಆರ್ಭಟಕ್ಕೆ ವಿಶಾಖಪಟ್ಟಣಂನ ಜನ ವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಎಲ್ಲೆಲ್ಲೂ ಮಳೆ ನೀರು ಆವರಿಸಿದೆ. ನೀರಲ್ಲಿ ಸಿಲುಕಿದ್ದವರ ರಕ್ಷಣೆ ವೇಳೆ ದೊಡ್ಡ ಅನಾಹುತ ತಪ್ಪಿದೆ. ಜನರನ್ನ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಗಳಿಗೆ ಕರೆತರುವಾಗ ಕೆಲವರು ಕೊಚ್ಚಿ ಹೋಗಿದ್ದಾರೆ. ಈ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಕೆಲವರನ್ನು ಸುರಕ್ಷಿವಾಗಿ ರಕ್ಷಿಸಲಾಗಿದೆ.
ಇನ್ನೂ ಗುಡ್ಡದ ಮಣ್ಣು ಜರುಗಿ ವಾಸವಿದ್ದ ಮನೆಗಳ ಮೇಲೆ ಬಿದ್ದ ಪರಿಣಾಮ ನಾಲ್ವರು ಬಲಿಯಾಗಿದ್ದಾರೆ. ಮಳೆಯ ಹೊಡೆತಕ್ಕೆ ವಿಶಾಖಪಟ್ಟಣಂನ ಬೀಚ್ ರಸ್ತೆಯಲ್ಲಿರುವ ಕಾಳಿಮಾತಾ ದೇವಸ್ಥಾನದ ಬಳಿಯ ಫುಟ್ಪಾತ್ ಛಿದ್ರ ಛಿದ್ರವಾಗಿದೆ.
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓಡಾಡೋ ವಿಜಯವಾಡದ ಪಂಡಿತ್ ನೆಹರು ಬಸ್ ನಿಲ್ದಾಣದಲ್ಲಿ ರಸ್ತೆನೇ ಕಾಣದಷ್ಟು ನೀರು ಆವರಿಸಿತ್ತು. ಸುಮಾರು ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿದ್ದು, ಅದರಲ್ಲಿ ಬಸ್ಗಳು ಈಜುತ್ತಿದ್ದಂತೆ ಕಾಣ್ತಿತ್ತು. ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಎಂಟು ಜನರು ಪ್ರಾಣ ಕಳೆದುಕೊಂಡಿದ್ದು ಮೃತರ ಕುಟುಂಬಕ್ಕೆ ಆಂಧ್ರ ಸಿಎಂ ಚಂದ್ರಬಾಬುನಾಯ್ಡು ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.