ಬೆಂಗಳೂರು:- ಮಳೆ ಮಳೆ, ಮಳೆ ಮಳೆ ಎಲ್ಲೆಲ್ಲೂ ನೀರು, ವಾಹನ ಸವಾರರ ಪರದಾಟ. ಇದು ಬೆಂಗಳೂರಿನ ಸಧ್ಯದ ಪರಿಸ್ಥಿತಿ.
ಪಾಣತ್ತೂರು ರೈಲ್ವೇ ಅಂಡರ್ಪಾಸ್ನಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ನಿಧಾನಗತಿಯಿಂದ ಕೂಡಿದೆ. ಹೀಗಾಗಿ ಸವಾರರು ಪರ್ಯಾಯ ರಸ್ತೆಗಳನ್ನು ಬಳಸಬೇಕೆಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ
ವರ್ತೂರು ಗುಂಜೂರು ರಸ್ತೆಯಲ್ಲಿ ಕೆಎಫ್ಸಿ ಬಳಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದೆ. ಹೀಗಾಗಿ ಪರ್ಯಾಯ ರಸ್ತೆಗಳನ್ನು ಬಳಸಲು ಸೂಚಿಸಲಾಗಿದೆ.
ಮಡಿವಾಳ ಪೊಲೀಸ್ ಠಾಣೆ, ಎಂಸಿಎಚ್ಎಸ್ ಕಾಲೋನಿ, ಸ್ಯಾಂಕಿ ರಸ್ತೆ, ಹಳೆ ಹೈಗ್ರೌಂಡ್, ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್, ಕಾವೇರಪ್ಪ ಬಡಾವಣೆ, ವಸಂತನಗರ, ಮಿಲ್ಲರ್ಸ್ ರಸ್ತೆ, ರಾಮಕೃಷ್ಣನಗರ, ಗಂಗಾನಗರ, ಕೆಆರ್ ಸರ್ಕಲ್ ಅಂಡರ್ ಪಾಸ್ಗಳಲ್ಲಿ ನೀರು ನಿಂತಿದೆ. ಹೀಗಾಗಿ ವಾಹನ ಸಂಚಾರ ನಿಧಾನಗತಿಯಿಂದ ಕೂಡಿದೆ.
ವಡ್ಡರಪಾಳ್ಯ ಜಂಕ್ಷನ್ನಲ್ಲಿ ನೀರು ನಿಂತಿರುವುದರಿಂದ, ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ ದಯಮಾಡಿ ಸಹಕರಿಸಿ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಕೊಡೆ ಜಂಕ್ಷನ್, ವಿಂಡ್ಸರ್ ಮ್ಯಾನರ್ ರೈಲ್ವೆ ಸೇತುವೆ, ಸ್ಯಾಂಕಿ ರಸ್ತೆ, ಪಿಜಿ ಹಳ್ಳಿ ಮಿಲ್ಲರ್ಸ್ ರಸ್ತೆ ಕೆಳಸೇತುವೆಯಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದೆ.
ವಿಂಡ್ಸರ್ ಮ್ಯಾನರ್ ರೈಲ್ವೇ ಬ್ರಿಡ್ಜ್ ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ, ಪಿಜಿ ಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.