ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ ಪ್ರಾಂಚೈಸಿಗಳು ಆಟಗಾರರ ಖರೀದಿಯಲ್ಲಿ ಮುಳುಗಿವೆ.
ಹರ್ಷಿತ್ ರಾಣಾ ಟೀಮ್ ಇಂಡಿಯಾ ಸೇರ್ಪಡೆ ವದಂತಿ: ಸ್ಪಷ್ಟನೆ ಕೊಟ್ಟ ಕೋಚ್!
ಈ ಮಧ್ಯೆ ಕನ್ನಡಿಗ ರಾಹುಲ್ ಲಕ್ನೋ ತೊರೆಯೋದು ಕನ್ಫರ್ಮ್ ಎನ್ನಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಾಹುಲ್ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಸ್ವತಃ ರಾಹುಲ್ ಅವರೇ ಲಕ್ನೋ ತಂಡದಲ್ಲಿ ಆಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಲಕ್ನೋ ನೀಡಿದ್ದ ಬೃಹತ್ ಮೊತ್ತದ ಒಪ್ಪಂದವನ್ನೂ ರಾಹುಲ್ ತಿರಸ್ಕರಿಸಿದ್ದಾರೆ.
ಕಳೆದ ಮೂರು ಸೀಸನ್ಗಳಲ್ಲಿ ಲಕ್ನೋ ತಂಡದ ನಾಯಕತ್ವ ವಹಿಸಿದ್ದ ರಾಹುಲ್ ಅವರನ್ನು ಅತಿ ದೊಡ್ಡ ಮೊತ್ತವನ್ನು ಪಾವತಿಸುವ ಮೂಲಕ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ಬಯಸಿತ್ತು.ಆದರೆ, ರಾಹುಲ್ ತಂಡ ತೊರೆಯಲು ನಿರ್ಧರಿಸಿದ್ದಾರೆ.‘ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ಪ್ರಕಾರ ಕೆಎಲ್ ರಾಹುಲ್, ಲಕ್ನೋ ತಂಡದಲ್ಲಿ ಆಡಲು ಉತ್ಸುಕತೆ ಹೊಂದಿಲ್ಲ. ಹೀಗಾಗಿ ಲಕ್ನೋ ತಂಡವನ್ನು ತೊರೆಯಲು ರಾಹುಲ್ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಅವರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಲಕ್ನೋ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ ಎಂದು ಈ ಹಿಂದೆ ವರದಿಗಳು ಕೇಳಿಬಂದಿದ್ದವು. ಆದರೆ ಇದೀಗ ಕೇಳಿಬಂದಿರುವ ಸುದ್ದಿಯ ಪ್ರಕಾರ, ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನದಲ್ಲಿದ್ದರು. ತಂಡವು ಅವರಿಗೆ 18 ಕೋಟಿ ರೂಪಾಯಿ ನೀಡಲು ಸಿದ್ಧವಾಗಿತ್ತು. ಆದಾಗ್ಯೂ, ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳನ್ನು ಉಲ್ಲೇಖಿಸಿ ರಾಹುಲ್ ಲಕ್ನೋದಿಂದ ದೂರವಾಗಲು ನಿರ್ಧರಿಸಿದ್ದಾರೆ ಎಂದು ವರದಿ ಮಾಡಿದೆ
ಲಕ್ನೋ ಸೂಪರ್ ಜೈಂಟ್ಸ್ ತೊರೆಯಲು ಸಿದ್ಧರಾಗಿರುವ ಕೆಎಲ್ ರಾಹುಲ್ ಅವರನ್ನು ಕೆಲವು ದೊಡ್ಡ ತಂಡಗಳು ಸಂಪರ್ಕಿಸಿವೆ. ಇದರಲ್ಲಿ ದೊಡ್ಡ ಹೆಸರುಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್. ರಾಹುಲ್ ಈ ಹಿಂದೆ ಆರ್ಸಿಬಿ ಪರ ಆಡಿದ್ದು, ಅವರ ಪ್ರದರ್ಶನ ಉತ್ತಮವಾಗಿತ್ತು. ಅದೇ ಸಮಯದಲ್ಲಿ, ಐದು ಬಾರಿಯ ಚಾಂಪಿಯನ್ ಸಿಎಸ್ಕೆ ಕೂಡ ರಾಹುಲ್ರನ್ನು ಖರೀದಿಸಲು ಆಸಕ್ತಿ ತೋರಿಸಿದೆ.