ರಾಯಚೂರು:- ರಾಮ ಮಂದಿರ ಉದ್ಘಾಟನೆ ಅಂಗವಾಗಿ ರಾಷ್ಟ್ರದ ಎಲ್ಲಾ ದೇವಾಲಯಗಳನ್ನು ಸ್ವಚ್ಚತೆ ಮಾಡುವಂತೆ ಆದೇಶ ಹೊರಡಿಸಿದ ಹಿನ್ನೆಲೆ, ರಾಯಚೂರು ನಗರದ ರಾಘವೇಂದ್ರ ಸ್ವಾಮಿ ಮಠದ ಆವರಣ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಈ ಬಗ್ಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಇಂದಿನಿಂದ ಮೂರು ದಿನಗಳ ಕಾಲ ನಗರದ ಎಲ್ಲಾ ದೇವಸ್ಥಾನಗಳು ಸ್ವಚ್ಚತೆ ಮಾಡಲಾಗುವುದು. ನಗರದ ಸಾರ್ವಜನಿಕರೊಂದಿಗೆ ಈ ಒಂದು ಸ್ವಚ್ಚತಾ ಕಾರ್ಯ ಮಾಡಲಾಗುವುದು. ಜನವರಿ 22ರಂದು ಎಲ್ಲಾ ಸಾರ್ವಜನಿಕರು ಮನೆಗಳಲ್ಲಿ 5 ಪ್ರಣತಿ ಹಚ್ಚುವ ಮೂಲಕ ರಾಮನಿಗ ಸಮರ್ಪಣೆ ಮಾಡಬೇಕು ಎಂದರು.